HomePage_Banner_
HomePage_Banner_
HomePage_Banner_

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ: ಕರ್ನಾಟಕ ತಂಡಕ್ಕೆ ಪಟ್ರಮೆಯ ಕು| ಅಕ್ಷತಾ ಆಯ್ಕೆ

Advt_NewsUnder_1

ಪಟ್ರಮೆ: ಬಂಟ್ವಾಳ ತಾಲೂಕಿನ ವಗ್ಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕು| ಅಕ್ಷತಾ ರವರು ಮಧ್ಯಪ್ರದೇಶದಲ್ಲಿ ನಡೆಯಲಿರುವ ಪ್ರೌಢಶಾಲಾ ಬಾಲಕಿಯರ ವಿಭಾಗದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇವರು ಪಟ್ರಮೆಯ ಸ.ಕಿ.ಪ್ರಾ.ಶಾಲೆ ಅನಾರು ಇಲ್ಲಿ 1 ರಿಂದ 5ನೇ ತರಗತಿಯವರೆಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು, 6ನೇ ತರಗತಿಯಿಂದ ವಗ್ಗ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರು ಮೊರಾರ್ಜಿ ವಸತಿ ಶಾಲೆಯ ದೈಹಿಕ ಶಿಕ್ಷಕ ಆಸಿದ್ ಪಡಂಗಡಿ ಇವರಿಂದ ತರಬೇತಿಯನ್ನು ಪಡೆದಿದ್ದಾರೆ. ಈಕೆ ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿಗಳಾದ ಶ್ರೀಮತಿ ಮೋಹಿನಿ ಮತ್ತು ಸದಾಶಿವ ಗೌಡ ದಂಪತಿ ಪುತ್ರಿ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.