ಬೆಳ್ತಂಗಡಿ : ಹುಣ್ಸೆಕಟ್ಟೆ ಇಲ್ಲಿಯ 18 ನೇ ವರ್ಷದ ಗಣೇಶೋತ್ಸವ ಧಾರ್ಮಿಕ ಸಭೆಯು ಸೆ. 14 ರಂದು ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಜರುಗಿತು.ಕಾರ್ಯಕ್ರಮದ ಗೌರವಾಧ್ಯಕ್ಷ ಲಕ್ಷಣ್ ಮೆಸ್ಕಾಂ ಸ್ವಾಗತಿಸಿದರು.
ಶಾಸಕ ಹರೀಶ್ ಪೂಂಜ, ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ರಾಜೇಶ್, ಬೆಳ್ತಂಗಡಿ ನ್ಯಾಯವಾದಿ ವಸಂತ ಮರಕಡ, ಪ್ರ.ಬಂ.ಸ್ವಹಾಯ ಸಂಘ ಬಿ ಒಕ್ಕೂಟ ಬೆಳ್ತಂಗಡಿ ಅಧ್ಯಕ್ಷ ದಯನಂದ ಕೋಟ್ಯಾನ್, ಆರ್.ಎಫ್.ಸಿ ಬಾಯ್ಸ್ ಅಧ್ಯಕ್ಷ ದೀಕ್ಷಿತ್ ರೆಂಕೆದಗುತ್ತು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಟಿ. ದಯಾನಂದ, ಬೆಳ್ತಂಗಡಿ ಕೆಂಬರ್ಜೆ ಫ್ರೆಂಡ್ಸ್ ಅಧ್ಯಕ್ಷ ಬಾಲಕೃಷ್ಣ ಗೌಡ, ಹುಣ್ಸೆಕಟ್ಟೆ ಹಾ.ಉ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರಮಾದೇವಿ, ಪಿ.ಡಬ್ಯೂ.ಡಿ ಗುತ್ತಿಗೆದಾರ ಜಯಕುಮಾರ ಕಲ್ಲಗುಡ್ಡೆ, ರೆಂಕೆದಗುತ್ತು ಕ್ರೇಜಿ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಅನ್ಸಾಫ್ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಲಕ್ಷ್ಮಣ ಮೆಸ್ಕಾಂ ಇವರು ಹುಣ್ಸೆಕಟ್ಟೆಯಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಶಾಸಕರ ಬಳಿ ವಿನಂತಿಸಿಕೊಂಡರು. ನಂತರ ಮಾತನಾಡಿದ ಶಾಸಕ ಹರೀಶ್ ಪೂಂಜ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯ ಯುವಕರ ಕೆಲಸಕ್ಕೆ ಶ್ಲಾಘಿಸಿದರು. ಇಂತಹ ಒಂದು ತಂಡ ಪ್ರತಿಯೊಂದು ಗ್ರಾಮದಲ್ಲಿ ಇರಬೇಕೆಂದು ನುಡಿದರು. ಗಣೇಶೋತ್ಸವ ಮಾಡುವ ಉದ್ದೇಶ ದುಶ್ಚಟ ಮುಕ್ತ ಸಮಾಜ ಕಟ್ಟಲು. ಅಂತಹ ಕೆಲಸಗಳನ್ನು ಈ ಯುವಕರ ತಂಡ ಮಾಡುತ್ತಿದೆ. ಇದೇ ರೀತಿ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದರು. ಗೌರವಾಧ್ಯಕ್ಷರ ಮನವಿಯನ್ನು ಆಲಿಸಿದ ಶಾಸಕರು ಇಲ್ಲಿಯ ಮಂದಿರ ಕಟ್ಟುವುದಾಗಿ ಭರವಸೆ ನೀಡಿದರು ಹಾಗೂ ಶ್ರೀರಾಮ ಭಜನಾ ಮಂಡಳಿಗೆ ಶಾಸಕರ ಅನುದಾನ ನಿಧಿಯಿಂದ ಸಹಾಯ ಮಾಡುವುದಾಗಿಯೂ ಭರವಸೆಯಿತ್ತರು. ಮುಖ್ಯ ಅತಿಥಿ ವಸಂತ ಮರಕಡ ಇವರು ಮಾತನಾಡಿದರು.
ಸಂಚಾರ ಠಾಣಾಧಿಕಾರಿ ಓಡಿಯಪ್ಪ ಗೌಡ ರವರನ್ನು ಶ್ರೀರಾಮ ಭಜನಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀರಾಮ ಭಜನಾ ಮಂಡಳಿಯ ಸದಸ್ಯರಾದ ಸೀತರಾಮ್ ಧನ್ಯವಾದವಿತ್ತರು.