HomePage_Banner_
HomePage_Banner_
HomePage_Banner_

ಶಿರಾಡಿ ಘಾಟ್ ರಸ್ತೆ ದುರವಸ್ಥೆ : ಸಾರಿಗೆ ನಿಗಮಕ್ಕೆ ರೂ 2 ಕೋಟಿ ನಷ್ಟ

Advt_NewsUnder_1

ಉಜೆರೆ: ಧರ್ಮಸ್ಥಳ ಕೆ.ಎಸ್ ಆರ್.ಟಿ.ಸಿ ಡಿಪೋಗೆ 30 ಹೊಸ ವಾಹನಗಳನ್ನು ಕೊಟ್ಟಿದ್ದೇವೆ. ಶಿರಾಡಿ ಘಾಟ್ ರಸ್ತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜೀವನಾಡಿ. ಶಿರಾಡಿ ಘಾಟ್ ರಸ್ತೆ ಸಂಚಾರ ಅನಾನುಕೂಲತೆಯಿಂದ ನಿಗಮಕ್ಕೆ ರೂ.1.5 ರಿಂದ ೨ಕೋಟಿ ಯಷ್ಟು ನಷ್ಟವುಂಟಾಗಿದೆ. ಕೇಂದ್ರ ಕಚೇರಿ ಯಿಂದ ರೂ. 80 ಲಕ್ಷ ವೆಚ್ಚದಲ್ಲಿ ಹಳೆಯ ಕ್ವಾರ್ಟರ್ಸ್‌ಗಳ ನವೀಕರನಗೊಳಿಸ ಲಾಗುತ್ತಿದೆ. ರೂ 1.5 ಕೋಟಿ ವೆಚ್ಚದಲ್ಲಿ 12 ಹೊಸ ಕ್ವಾರ್ಟಸ್‌ಗಳನ್ನು2-3 ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸ ಲಾಗುವುದು. ವಿದ್ಯಾಥಿಗಳಿಗೆ ಬಸ್‌ಪಾಸ್ ಶಾಲಾ ಅವಧಿಯಲ್ಲಿ ಹೆಚ್ಚುವರಿ ಬಸ್ ಒದಗಿಸಿದ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದೆಂದು ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ವಿಭಾಗಾ ಧಿಕಾರಿ ನಾಗರಾಜ ಶಿರಾಲಿ ನುಡಿದರು.
ಅವರು ಸೆ. 13 ರಂದು ಧರ್ಮಸ್ಥಳ ಕೆ.ಎಸ್.ಆರ್.ಟಿ.ಬಸ್ ನಿಲ್ದಾಣದಲ್ಲಿ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ ೩೫ನೇ ವರ್ಷದ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಸಿ ಮಾತನಾಡುತ್ತಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಪ್ರಾಮಾಣಿಕರಾಗಿ ದುಡಿದು ಭಕ್ತಾಧಿಗಳನ್ನು ಕ್ಷೇತ್ರಕ್ಕೆ ಕರೆತಂದು ಸುರಕ್ಷಿತವಾಗಿ ಮರಳಿಸುವ ಪುಣ್ಯ ಕಾರ್ಯದಲ್ಲಿ ಸ್ವಾಮಿಯ ಸೇವೆ ಮಾಡುತ್ತಿದ್ದಾರೆ. ಪ್ರಮಾಣಿಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಸಿ ಜನ ಸ್ನೇಹಿಯಾಗ ಲೆಂದು ಆಶಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರನ್ನು ನಿಗಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 2017-18 ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ನೌಕರರ ಮಕ್ಕಳಿಗೆ, ನಿವೃತ್ತಿ ಹೊಂದಿದ ಸಿಬ್ಬಂದಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಮನೋಹರ ಎನ್.ಎಸ್ ದಯಾನಂದ, ನಾಗೇಶ್, ಸದಾಶಿವ ಇವರ ತಂಡವು ಮಳೆಗಾಲದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಹಳೆ ಸಾಮಾಗ್ರಿಗಳನ್ನು ಬಳಸಿ, ಸುಸಜ್ಜಿತ 4 ಬ್ರಶ್‌ಗಳನ್ನೊಳ ಗೊಂಡ ವಿನೂತನ ಶೈಲಿಯ ಸ್ವಯಂಚಾಲಿತ ಬಸ್ಸು ತೊಳೆಯುವ ಯಂತ್ರವನ್ನು ಅಳವಡಿಸಿ ರುತ್ತಾರೆ. ಹಳೆಯ ಸಾಮಾಗ್ರಿ ಗಳು ಕಂಪ್ಯೂಟರ್‌ನ ಯುಪಿಎಸ್ ಕಾಯಿಲ್ ತೆಗೆದು ರೂ. 500 ವೆಚ್ಚದಲ್ಲಿ ವೆಲ್ಡಿಂಗ್ ಮೆಶಿನ್ ತಯಾರಿಸಿ ರುತ್ತಾರೆ. ಹಳೆ ಸಾಮಾಗ್ರಿಗಳಿಂದ ಬೇರಿಂಗ್‌ಗೆ ಗ್ರೀಸಿಂಗ್ ಮಾಡುವ ಯಂತ್ರ ಬಾಡಿ ಶೀಟ್ ಬೆಂಡ್ ಮಾಡುವ ಯಂತ್ರ ತಯಾರಿಸಿ ತಮ್ಮ ಕೌಶಲ್ಯ ಮೆರೆದ ನಾಲ್ವರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಪುತ್ತೂರು ವಿಭಾಗದ ಸಂಚಾಲನಾ ಧಿಕಾರಿ ಮುರಳೀಧರ ಆಚಾರ್, ಅಂಕಿ ಅಂಶ ಅಧಿಕಾರಿ ಜಯಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾ ಗಣಪತಿ ಪ್ರತಿ ಸೇವಾಸಮಿತಿ ಅಧ್ಯಕ್ಷ ಶಿವರಾಮ ನಾಯ್ಕ ಸ್ವಾಗತಿಸಿ, ವೆಂಕ್ರಮಣ ಶೆಟ್ಟಿ ನಿರೂಪಿಸಿ, ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪ್ರಕಾಶ್ ಭಟ್ ವಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.