ಎಸ್.ಡಿ.ಎಂ ಪದವಿ ಕಾಲೇಜು: ‘ಅನ್ವೇಷಣೆ’ ತ್ರೈಮಾಸಿಕ ಪತ್ರಿಕೆ ಅನಾವರಣ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಧ.ಮಂ.ಪದವಿ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ವಿಭಾಗದ ‘ಅನ್ವೇಷಣೆ’ ತ್ರೈಮಾಸಿಕ ಪತ್ರಿಕೆಯನ್ನು ಇತ್ತೀಚೆಗೆ ಅನಾವರಣ ಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ|ಟಿ. ಎನ್. ಕೇಶವ್ ರವರು ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಇತಿಹಾಸದ ಮೂಲಕ ಗತಕಾಲದ ಗತಿಸಿದ ವಿಚಾರಗಳನ್ನು ತಿಳಿದುಕೊಳ್ಳಬಹುದು. ವೈಜ್ಞಾನಿಕ ಪ್ರಯೋಗಗಳ ಮೂಲಕವೂ ಇತಿಹಾಸದ ಕಾಲವನ್ನು ಕಂಡುಕೊಳ್ಳಬಹುದು. ಅದಕ್ಕಾಗಿ ನಾವೆಲ್ಲರೂ ಇತಿಹಾಸದ ಬಗೆಗೆ ವಿಶೇಷ ಆಸಕ್ತಿಯನ್ನು ಹೊಂದಬೇಕು. ಆ ಮೂಲಕ ಇತಿಹಾಸದ ಸಂರಕ್ಷಣೆ ಮಾಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ, ಯೋಗ ವಿಜ್ಞಾನದಲ್ಲಿ ಸಂಶೋಧನಾ ಅಧ್ಯಯನವನ್ನು ನಡೆಸಿರುವ ಡಾ| ಉದಯ್ ಕುಮಾರ್ ಕೆ , ವಿಭಾಗದ ಮುಖ್ಯಸ್ಥರಾದ ಡಾ| ಪುಂಡರಿಕ ಹಾಗೂ ಸಹ ಪ್ರಾಧ್ಯಾಪಕರಾದ  ರತನ್ ಸಾಲ್ಯಾನ್  ಉಪಸ್ಥಿತರಿದ್ದರು.
ಕಿರಣ್‌ರಾಜ್ ಸ್ವಾಗತಿಸಿ, ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಮಿಸ್ರಿಯಾ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.