HomePage_Banner_
HomePage_Banner_

ಉಜಿರೆ: ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ‘ಯೋಗ ವಿಜ್ಞಾನ’ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಶ್ರೀ ಧ. ಮಂ. ಪದವಿ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ನಡೆದ ‘ಐತಿಹಾಸಿಕ ಪರಂಪರೆ ಉಳಿಸಿರಿ’ ಸಾಪ್ತಾಹಿಕ ಕಾರ್ಯಕ್ರಮದ ಅಡಿಯಲ್ಲಿ ‘ಯೋಗ ವಿಜ್ಞಾನ’ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ|ಉದಯ್ ಕುಮಾರ್ ಕೆ   ಮಾತನಾಡಿ, ಯೋಗ ಎಂಬುದು ವ್ಯಾಯಾಮವಾಗಿ ನಡೆಸುವುದಲ್ಲ, ದೈಹಿಕ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಮನಸ್ಸನ್ನು ನಿರ್ವಹಿಸುವುದೇ ಯೋಗ. ಯೋಗ ಹಸಿವು-ದಣಿವನ್ನು ಉಂಟುಮಾಡದೆ, ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ ನಾವೆಲ್ಲರೂ ಯೋಗದ ಮೂಲಕ ಏಕಾಗ್ರತೆಯನ್ನು ಹೊಂದಿ ಆರೋಗ್ಯವಂತರಾಗೋಣ” ಎಂದು ಹೇಳಿದರು
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ  ಪ್ರೊ|ಟಿ.ಎನ್. ಕೇಶವ್, ವಿಭಾಗದ ಮುಖ್ಯಸ್ಥರಾದ ಡಾ| ಪುಂಡರಿಕ ಹಾಗೂ ಸಹ ಪ್ರಾಧ್ಯಾಪಕ  ರತನ್ ಸಾಲ್ಯಾನ್ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕಿರಣ್ ರಾಜ್ ಸ್ವಾಗತಿಸಿ, ಮಿಸ್ರಿಯಾ ಧನ್ಯವಾದವಿತ್ತು, ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.