ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ಗೋಲ್ಡ್ ಫೆಸ್ಟಿವಲ್ ಬಹುಮಾನ ವಿತರಣೆ

ಉಜಿರೆ: ಉಜಿರೆಯ ಪ್ರತಿಷ್ಠಿತ ಚಿನ್ನಾಭರಣಗಳ ಮಾರಾಟ ಮಳಿಗೆ ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ಇವರು ಪ್ರತಿವರ್ಷದಂತೆ ಆಯೋಜಿಸಿದ್ದ ಗೋಲ್ಡ್ ಫೆಸ್ಟಿವಲ್ 2018 ರ ಡ್ರಾ ವಿಜೇತರಿಗೆ ಬಹುಮಾನಗಳನ್ನು ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ಮಳಿಗೆಯಲ್ಲಿ ನಡೆಯಿತು.

ಮಾಲಕರ ಮಾತಾಪಿತರಾದ ಶ್ರೀಮತಿ ಮೋಹಿನಿ ಬಿ. ಆಚಾರ್ಯ ಮತ್ತು ಕೆ.ಬಾಲಕೃಷ್ಣ ಆಚಾರ್ಯ ವಿಜೇತರಿಗೆ ಬಹುಮಾನಗಳನ್ನು ಹಸ್ತಾಂತರಿಸಿದರು. ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾದ ಜಯಶಂಕರ್ ಎಂ.ಬಿ. ಕಾರ್ಯಕ್ರಮ ನಿರೂಪಿಸಿದರು. ಬಹುಮಾನ ವಿಜೇತರು ಅವರ ಕುಟುಂಬ ಸ್ಥರು, ಗ್ರಾಹಕರು ಮಾಲಕರ ಸಹೋದರರಾದ ಹರೀಶ್ ಕುಮಾರ್, ರಾಜೇಶ್ ಕುಮಾರ್, ಮಾವ ಗಣೇಶ್ ಎಂ. ಕಾವಲ್, ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಾಲಕ ಕೆ.ರಮೇಶ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದಕ್ಕೂ ಸಹಕಾರ ನೀಡುವಂತೆ ವಿನಂತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.