HomePage_Banner_
HomePage_Banner_

ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ ಶಾಖೆಯನ್ನು ಹೊಂದಿ, ಕಾರ್ಕಳ ದಾನಶಾಲಾ ಮಹಾವೀರ ಕಾಂಪ್ಲೇಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 2017-18 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಇತ್ತಿಚೇಗೆ ಜರುಗಿತು.
ಅಧ್ಯಕ್ಷತೆಯನ್ನು ಸಹಕಾರಿ ಅಧ್ಯಕ್ಷ ನೇಮಿರಾಜ ಆರಿಗ ವಹಿಸಿ ಮಾತನಾಡುತ್ತಾ ಸಹಕಾರಿಯು ರೂ. 21550 ಪಾಲುಬಂಡವಾಳವನ್ನು ಹೊಂದಿದ್ದು, ಆರ್ಥಿಕ ವರ್ಷದಲ್ಲಿ ಬಂದ ಲಾಭದಲ್ಲಿ ಉಪವಿಧಿಯನ್ವಯ ವಿಂಗಡಣೆ ಮಾಡಿ ಸದಸ್ಯರಿಗೆ ಶೇ 12 ಲಾಭಂಶ ಘೋಷಣೆ ಮಾಡಿದರು. ಸಹಕಾರಿಯ ಉಜಿರೆ ಹಾಗೂ ಬೆಳ್ತಂಗಡಿ ಶಾಖೆಯಲ್ಲಿ ಇ-ಸ್ಟಾಪಿಂಗ್ ಸೌಲಭ್ಯವಿದ್ದು, ಉತ್ತಮ ವ್ಯವಹಾರ ಹೊಂದಿದೆ. ಸಹಕಾರಿಯ ಕೇಂದ್ರ ಕಚೇರಿ ಕಾರ್ಕಳದಲ್ಲಿ ಹಾಗೂ ಬೆಳ್ತಂಗಡಿ ಉಜಿರೆಯಲ್ಲಿ ಜಾಗದ ಆರ್.ಟಿ.ಸಿ ವಿತರಣೆಗೆ ಈ ದಿನ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭ ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್‌ರಿಗೆ ಪ್ರಥಮ ಪಹಣಿ ಪತ್ರವನ್ನು ವಿತರಿಸಲಾಯಿತು. ಗತವರ್ಷದ ಆಯವ್ಯಯವನ್ನು ಮಂಜೂರು ಮಾಡಲಾಯಿತು. ಮುಂದಿನ ಸಾಲಿನ ಬಜೆಟ್‌ನ್ನು ಅನುಮೋದಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಪ್ರವೀಣ್ ಭಟ್ ಸಭೆಯಮನ್ನುದ್ದೇಶಿಸಿ ಮಾತನಾಡಿದರು. ಸಹಕಾರಿಯ ಸಿಬಂದಿಗಳ ಪ್ರಾರ್ಥನೆ ಬಳಿಕ ಸಹಕಾರಿಯ ನಿರ್ದೇಶಕ ಎಸ್. ಪಾರ್ಶ್ವನಾಥ ವರ್ಮ ಸ್ವಾಗತಿಸಿ, ವಿಶುಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.