HomePage_Banner_
HomePage_Banner_
HomePage_Banner_

ವಾರಂಟ್ ಆರೋಪಿ ವಿದೇಶದಿಂದ ವಾಪಾಸಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಪೊಲೀಸ್ ವಶಕ್ಕೆ

Advt_NewsUnder_1

ಬೆಳ್ತಂಗಡಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿದೇಶದಲ್ಲಿದ್ದ ವಾರಂಟ್‌ದಾರ ನವಾಜ್ ಕುಂಟಿನಿ ಎಂಬವರು ಸ್ವದೇಶಕ್ಕೆ ಆಗಮಿಸುತ್ತಿದ್ದಂತೆ ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2015 ರ ಪ್ರಕರಣದಲ್ಲಿ ಆರೋಪಿಯಾಗಿದ್ದ ಇವರನ್ನು ಇಲ್ಲಿನ ಎಸ್‌ಐ ರವಿ ಬಿ.ಎಸ್ ಮಾರ್ಗದರ್ಶನದಲ್ಲಿ ಸೆ. 11 ರಂದು ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ನವಾಜ್‌ರ ಪಾಸ್‌ಪೋರ್ಟನ್ನೂ ನ್ಯಾಯಾಲಯ ವಶಕ್ಕೆ ಪಡೆದಿದೆ. ಈ ಪ್ರಕ್ರಿಯೆಯಲ್ಲಿ ಎಸ್ಪಿ ಡಾ. ರವಿಕಾಂತೇ ಗೌಡ ಆದೇಶದಂತೆ ಬೆಳ್ತಂಗಡಿ ಎಸ್‌ಐ ರವಿ ಬಿ ಎಸ್, ಸಿಬ್ಬಂದಿಗಳಾದ ದುರ್ದಾದಾಸ್, ಪಿ.ಎಸ್ ವೆಂಕಪ್ಪ, ಸಂದೀಪ್ ಎಸ್, ಮನೋಜ್ ಕುಮಾರ್ (ಈ ಮೊದಲು ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದವರು) ಸಹಕರಿಸಿರುತ್ತಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.