HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸಕಾಲಿಕ ಸಂದೇಶ ನೀಡಿದ ಲಾಯಿಲ ಮಹಾಗಣಪತಿ ಉತ್ಸವದ ಸ್ಟೇಜ್ ಬ್ಯಾನರ್

ಲಾಯಿಲ: ಲಾಯಿಲ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗಣೇಶ ಕಲಾಮಂದಿರದಲ್ಲಿ ನಡೆದ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಡೆದದ್ದೂ ಮಾತ್ರವಲ್ಲದೆ ವೈಶಿಷ್ಟ್ಯಪೂರ್ಣವಾಗಿ ಮೂಡಿಬಂದ ಪ್ರಧಾನ ವೇದಿಕೆಯ ಹಿಂಪರದೆ (ಬ್ಯಾನರ್) ಜನಜಾಗೃತಿಯ ಸಂದೇಶ ರವಾನಿಸುವ ಮೂಲಕ ಆಕರ್ಷಣೆ ಮತ್ತು ಜನಮನ್ನಣೆಗೆ ಪಾತ್ರವಾಯಿತು.
“ಸೈನಿಕರು ನಮ್ಮ ದೇಶದ ಆಸ್ತಿ” ಎಂಬ ವಾಖ್ಯದ ಜೊತೆಗೆ ಗಡಿಕಾಯುವ ಸೈನಿಕರ ಭಾವಚಿತ್ರ, “ತುಳು ಭಾಷೆಗೆ ಮಾನ್ಯತೆ ದೊರೆಯಲಿ” ಎಂಬ ಘೋಷದೊಂದಿಗೆ ತುಳುನಾಡ ಜಾನಪದ ಆಚರಣೆಗೊಳಲ್ಲೊಂದಾದ ಭೂತಾರಾಧನೆ ಮತ್ತು ತುಳುನಾಡಿನ ಜಾನಪದ ಕ್ರೀಡೆ ಕಂಬಳದ ದೃಷ್ಯ, ಪ್ರಾಕೃತಿಕ ವೈಪರೀತ್ಯದಿಂದ ತತ್ತರಿಸಿ ಹೋಗಿರುವ ಕೊಡಗು ಇಲ್ಲಿನ ವಿಕೋಪದ ದೃಷ್ಯಾವಳಿಯೊಂದಿಗೆ “ಕೊಡಗಿನ ನವ ನಿರ್ಮಾಣಕ್ಕೆ ಕೈ ಜೋಡಿಸೋಣ” ಎಂಬ ಒಕ್ಕಣೆ, ವನ್ಯ ಜೀವಿಗಳ ಚಿತ್ರ ಪ್ರಕಟಿಸಿ “ವನ್ಯಜೀವಿಗಳನ್ನು ಸಂರಕ್ಷಿಸಿ” ಎಂಬ ಬಿನ್ನಹ, “ರೈತರೇ ನಮ್ಮ ದೇಶದ ಬೆನ್ನೆಲುಬು” ಎಂಬ ವಾಖ್ಯದ ಜೊತೆಗೆ ನೇಜಿ ನಾಟ್ಟಿ ಮತ್ತು ಗದ್ದೆ ಉಳುವ ದೃಶ್ಯ, ಮತ್ತೊಂದೆಡೆಯಿಂದ “ರಕ್ತದಾನ ಮಾಡಿ ಜೀವ ಉಳಿಸಿ” ಎಂಬ ಸಂದೇಶ, “ನೀರನ್ನು ಮಿತವಾಗಿ ಬಳಸಿ” ಎಂಬ ವಾಖ್ಯದೊಂದಿಗೆ ನಳ್ಳಿ ನೀರನ್ನು ಬಸಿಯುತ್ತಿರುವ ಬಾಲಕರಿಬ್ಬರ ಚಿತ್ರ ಪ್ರದರ್ಶಿಸುವ ಮೂಲಕ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಸಂದೇಶ ರವಾನಿಸಲಾಯಿತು. ಬ್ಯಾನರ್‌ನಲ್ಲಿ ಒಂದೊಂದು ವಿಚಾರಕ್ಕೆ ಸಂಬಂಧಿಸಿದಂತೆ ಜನರ ಮನದಲ್ಲಿ ಬದಲಾವಣೆಯ ಹೊಸ ಬೆಳಕು ಮೂಡಿಸುವ ರೀತಿಯಲ್ಲಿ ಹಾಕಲಾಗಿದ್ದ ಒಂದೊಂದು ಭಾವಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.