ನಾವೂರು ದೇವಸ್ಥಾನದಲ್ಲಿ ಭಗವದ್ಗೀತಾ ತರಗತಿ ಪ್ರಾರಂಭ

Advt_NewsUnder_1
Advt_NewsUnder_1
Advt_NewsUnder_1

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಾವೂರು ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಭಗವದ್ಗೀತಾ ತರಗತಿಯ ಶುಭಾರಂಭವು ಸೆ.15 ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಿತು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ಯು. ವಿಜಯ ರಾಘವ ಪಡ್ವೆಟ್ನಾಯರು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಉಜಿರೆ ಬೆನಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಗೋಪಾಲಕೃಷ್ಣ ಇಂದಬೆಟ್ಟು ಗುತ್ತುವಿನ ಅಜಿತ ಕುಮಾರ್ ಜೈನ್, ಬಂಗಾಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷರಾದ ಎನ್. ಲಕ್ಷ್ಮಣ ಗೌಡ, ನಾವೂರು ಆರೋಗ್ಯ ಕ್ಲಿನಿಕ್‌ನ ಡಾ| ಪ್ರದೀಪ್, ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾದ ಎ.ಬಿ.ಉಮೇಶ್ ಅತ್ಯಡ್ಕ , ಪೆರ್ಲ-ಬೈಪಾಡಿ ಸ.ಪ್ರೌಢ ಶಾಲೆಯ ಅಧ್ಯಾಪಕರಾದ ವಿವೇಕಾನಂದ ಗೌಡ ಬೋಜಾರ ಉಪಸ್ಥಿತರಿದ್ದರು.
ಕು.ನಿಶಾ ಪ್ರಾರ್ಥಿಸಿದರು, ಎ.ಬಿ ಉಮೇಶ್ ಸ್ವಾಗತಿಸಿ, ಹರೀಶ್ ಕಾರಿಂಜ ಧನ್ಯವಾದವಿತ್ತು, ಸುರೇಶ್ ಗೋಳಿದಡಿ ಕಾರ್ಯಕ್ರಮ ನಿರೂಪಿಸಿದರು.
ದೇವಸ್ಥಾನದಲ್ಲಿ ಪ್ರತೀ ಶನಿವಾರ ಭಗವದ್ಗೀತಾ ತರಗತಿಯು ಡಾ| ಪ್ರದೀಪ್ ನಡೆಸಿಕೊಡುವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.