ಕಬಡ್ಡಿ ಪಂದ್ಯಾಟ: ಮುಹಮ್ಮದ್ ಹಾಶಿರ್ ರಾಜ್ಯ ಮಟ್ಟಕ್ಕೆ

ಗೇರುಕಟ್ಟೆ: ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಹಾಗೂ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸುರಿಬೈಲು ಇದರ ಜಂಟಿ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟದಲ್ಲಿ ಮನ್‌ಶರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೇರುಕಟ್ಟೆ ವಿದ್ಯಾರ್ಥಿ ಮುಹಮ್ಮದ್ ಹಾಶಿರ್ ಮದ್ದಡ್ಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೆ ಉತ್ತಮ ಕ್ಯಾಚರ್ ವೈಯುಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಸೆ. 19 ಮತ್ತು 20 ರಂದು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಧ್ಯಾರ್ಥಿಯು ಸ್ಪರ್ಧಾರ್ಥಿಯಾಗಿ ಭಾಗವಹಿಸಲಿದ್ದು, ಮನ್‌ಶರ್ ಇಂಗ್ಲಿಷ್ ಮೀಡಿಯಂ ದೈಹಿಕ ಶಿಕ್ಷಕ ಮೊಹಮ್ಮದ್ ಆಶಿಕ್ ಮಡಂತ್ಯಾರ್ ಅವರಿಂದ ಈ ವಿದ್ಯಾರ್ಥಿ ತರಬೇತು ಪಡೆದಿದ್ದಾರೆ. ವಿದ್ಯಾರ್ಥಿ ಹಾಶಿರ್ ಮದ್ದಡ್ಕದ ದಿ. ಇಂತಿಯಾಝ್ ಹಾಗೂ ಆಮಿನಮ್ಮ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.