ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಗುರುಜಯಂತಿ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಮ್ಮಲ್ಲಿರುವ ಶಂಶಯ, ಮತ್ಸರ ಗುಣ, ಸಣ್ಣತನ ಮೊದಲಾದ ಗುಣಗಳಿಂದ ನಮಗೆ ದೇವರ ಅಂತಃಸತ್ವದ ದರ್ಶನಕ್ಕೆ ಅಡ್ಡಿಯಾಗಿದೆ. ಶ್ರೀ ನಾರಾಯಣ ಗುರುಗಳ ತತ್ವದ ಬಗ್ಗೆ ಕೇವಲ ಬಾಯಲ್ಲಿ ಮಾತ್ರ ಹೇಳಿದರೆ ಸಾಕಾಗದು. ಅದು ನಮ್ಮ ಬದುಕಿನ ಭಾಗವಾಗಿ ಬರಬೇಕಾಗಿದೆ. ಪುಸ್ತಕ ಓದಿದ ಮಾತ್ರಕ್ಕೆ ವಿದ್ಯೆಯಾಗುವುದಿಲ್ಲ. ಓದಿದ ವಿಚಾರಧಾರೆಗಳನ್ನು ಮನದಾಳದಲ್ಲಿ ತುಂಬಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮ ಒಳಗಣ್ಣು ತೆರೆಯುತ್ತದೆ. ಅಂತಹಾ ಅಂತಃಸತ್ವದಿಂದ ಕೂಡಿದ ಶಿಕ್ಷಣವನ್ನು ಮಾತ್ರ ಬ್ರಹ್ಮಶ್ರೀ ನೃಆರಾಯಣ ಗುರುಗಳು ವಿದ್ಯೆ ಎಂದಿದ್ದಾರೆ ಎಂದು ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಸೆ. 16 ರಂದು ಬೆಳ್ತಂಗಡಿಯ ಆಶಾಸಾಲಿಯಾನ ಕಲ್ಯಾಣ ಮಂಟಪದಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಗುರುಜಯಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ವೇದಗಳೇ ದೇಶದ ಸಂವಿಧಾನ. ಅಲ್ಲಿ ಯವುದೇ ಜಾತ ಧರ್ಮದ ಸೂಚನೆ ನೀಡಿಲ್ಲ. ಮನುಷ್ಯ ಮನುಷ್ಯನಾಗಿ ಹೇಗೆ ಬದುಕಬೇಕೆಂಬ ಮಾರ್ಗದರ್ಶನ ನೀಡಿದೆ ನಮಗೆ ಇಂದು ರಾಜಕೀಯ, ಪಕ್ಷ ನಿಷ್ಟೆಯೇ ಶ್ರೇಷ್ಠವಾಗಿದೆ. ಬುದ್ದಿಜೀವಿಗಳೆನಿಸಿಕೊಂಡವರು ಇಂದು ವೇದಪುರಾಣದಲ್ಲಿ ದೇಶ ಹಾಲಾಗುತ್ತಿದೆ ಎನ್ನುತ್ತಿದ್ದಾರೆ. ಇಷ್ಟೆಲ್ಲ ತಿಳಿದುಕೊಂಡವರೆಲ್ಲ ಈ ವಿಚಾರ ತಿಳಿಯುವಲ್ಲಿ ಎಡವಿದರೇ ಎಂಬ ನೋವು ನಮ್ಮನ್ನು ಕಾಡುತ್ತಿದೆ. ನಮ್ಮ ಬುದ್ಧಿಯನ್ನು ಶುದ್ಧಗೊಳಿಸಿಕೊಳ್ಳುವ ಶಿಕ್ಷಣ ಪದ್ಧತಿ ಬೇಕು. ಮೌಲ್ಯಗಳು ಬೇಕು ಎಂಬ ಹಸಿವು ಎಲ್ಲೆಡೆ ಇದೆ. ಆದರೆ ಅದರ ಹೋರಾಟ ಹೇಗೆ ಪ್ರಾರಂಭ ಎಂಬುದು ಯಾರಿಗೂ ತಿಳಿದಿಲ್ಲ. ಆ ನಿಟ್ಟಿನಲ್ಲಿ ಶ್ರೀ ಪೀಠದಿಂದ ಅಂತಹಾ ಹೆಜ್ಜೆ ಇಟ್ಟಿದ್ದೇವೆ. ಅದು ಈಡೇರಲಿದೆಯೇ ಎಂಬ ಬಗ್ಗೆ ಇನ್ನೂ ಕೆಲವರಲ್ಲಿ ಪ್ರಶ್ನೆ ಇದೆ. 10-20 ವರ್ಷಗಳ ಒಳಗೆ ಅದು ಖಂಡಿತಾ ಸಾಕಾರಗೊಳ್ಳುತ್ತದೆ ಎಂದು ಸ್ವಾಮೀಜಿಯವರು ಭವಿಷ್ಯನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಈ ವರ್ಷ ಸಂಘದ ಮೂಲಕ 6 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆರೋಗ್ಯ ಶಿಬಿರದಂತಹಾ ಸಾಮಾಜಿಕ ಕಾರ್ಯ ಕೈಗೊಳ್ಳಲಾಗಿದೆ. ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸಂಘಕ್ಕೆ ಬ್ರಹ್ಮಶ್ರೀ ಪುರಸ್ಕಾರ ನೀಡಲಾಗುವುದು. ಅತ್ಯುತ್ತಮ ಕೃಷಿಕ ಮತ್ತು ಮಾಜಿ ಸೇನಾನಿಗಳನ್ನು ಗುರುತಿಸಲಾಗುತ್ತಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ನಮ್ಮ ಸಮಾಜ ಅತ್ಯಂತ ಹಿಂದುಳಿದಿದ್ದು ಅಸ್ಪೃಷ್ಯತೆಗೊಳಗಾಗಿ ನಲುಗಿ ಹೋಗಿದ್ದ ಕಾಲಘಟ್ಟದಲ್ಲಿ ಜನಿಸಿ ಬಂದ ಬ್ರಹ್ಮಶ್ರೀ ನಾರಾಯಣ ಗುರುಗಳು, ಹಿಂದುಳಿದ ಸಮಾಜದ ಪರಿವರ್ತನೆಗೆ ಮಹಾಹೆಜ್ಜೆ ಇಟ್ಟವರು ಎಂದರು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಭಗೀರಥ ಜಿ., ಯೋಗೀಶ್ ಕುಮಾರ್ ನಡಕರ, ಜಯರಾಮ ಬಂಗೇರ ಹೇರಾಜೆ, ಪಿ.ಕೆ ರಾಜು ಪೂಜಾರಿ, ಪದ್ಮನಾಭ ಮಾಣಿಂಜ, ವಸಂತ ಸಾಲಿಯಾನ್ ಕಾಪಿನಡ್ಕ, ಗಂಗಾಧರ ಮಿತ್ತಮಾರು, ಮಹಿಳಾ ಬಿಲ್ಲ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜೀತಾ ವಿ ಬಂಗೇರ, ಪ್ರಸ್ತುತ ಅಧ್ಯಕ್ಷೆ ರಾಜಶ್ರೀ ರಮಣ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಉಪ್ಪಾರು ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 6 ಲಕ್ಷ ರೂ. ವೆಚ್ಚದ ವಿದ್ಯಾರ್ಥಿ ವೇತನ ನೀಡಲಾಯಿತು. ಸೇನೆಯಲ್ಲಿ ಕೆಲಸ ಮಾಡಿ ನಿವೃತರಾದ ತಾಲೂಕಿನ ಸಮಾಜ ಬಾಂಧವ  25 ಮಂದಿಯನ್ನು ಸನ್ಮಾನಿಸಲಾಯಿತು. ರತ್ನಾ ಅಂಡಿಂಜೆ, ಗಿರಿಯಪ್ಪ ಪೂಜಾರಿ ಕರಾಯ ರಿಗೆ ಸಾಂತ್ವನ ನಿಧಿ ನೀಡಲಾಯಿತು. 

ಸಮಾಜ ಬಾಂಧವರರಾಗಿ ಮಾದರಿ ಕೃಷಿಕರಾದ ಸಂಜೀವ ಪೂಜಾರಿ ಮೋಡ್ಲ, ದಯಾನಂದ ಪೂಜಾರು ಮಿತ್ತಬಾಗಿಲು ಅವರಿಗೆ ಸನ್ಮಾನ ನಡೆಯಿತು. ದಿಕ್ಸೂಚಿ ಭಾಷಣಕಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರನ್ನು ಸನ್ಮಾನಿಸಲಾಯಿತು. ವಿನೋದಿನಿ ರಾಮಪ್ಪ ಬಳಗದವರು ಪ್ರಾರ್ಥನೆ ಹಾಡಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಬಲೆತೆಲಿಪಾಲೆ, ಮಜಾಭಾರತ ಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ ತೆಲಿಕೆದ ಬರ್ಸ ಕಾರ್ಯಕ್ರಮ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.