ಮಡಂತ್ಯಾರು 36 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ ಸಭೆ

ಮಡಂತ್ಯಾರು: ತಾನು ಹೇಗೆ ಸಂತೋಷವಾಗಿ ಬದುಕಬೇಕೆಂದು ಜನ ಅಂದುಕೊಳ್ಳುತ್ತಾರೋ ಅದೇ ಸಂತೋಷದ ಬದುಕು ತನ್ನ ಎದುರಿಗಿರುವವರಿಗೂ ಇರಬೇಕು ಎಂಬ ಕಲ್ಪನೆ ಬಹುಮುಖ್ಯವಾದುರು. ಸಮಾಜದಲ್ಲಿ ಧರ್ಮ ಅಧರ್ಮ ಎರಡೂ ಇದೆ. ಧರ್ಮದಲ್ಲಿ ಬಾಳುವವ ರಾಮನಾದರೆ ಅಧರ್ಮದ ಹಾದಿ ತುಳಿಯುವವ ರಾವಣನಾಗುತ್ತಾನೆ. ಆದ್ದರಿಂದ ದರ್ಮ ಅಧರ್ಮದ ಬಗ್ಗೆ ವಿವೇಚನೆಯಿಂದ ಬಾಳಿ ಒಳ್ಳೆತನದ ಬದುಕು ಬಾಳುವುದೇ ಧರ್ಮ ಎಂದು ಆಕಾಶವಾಗಿ ವಾರ್ತಾ ವಾಚಕಿ, ಕಲಾವಿದ ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ ಹೇಳಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಡಂತ್ಯಾರು ಇದರ ವತಿಯಿಂದ ಇಲ್ಲಿ ನ ಗಣಪತಿ ಮಂಟಪದಲ್ಲಿ ನಡೆದ 36 ನೇ ವರ್ಷದ ಶ್ರೀಗಣೇಶೋತ್ಸವದ ಸೆ. 16 ರ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.
ನಶ್ವರವಾದ ಶರೀರ, ಎಷ್ಟೇ ಹಣ ಅಂತಸ್ತು ಇದ್ದರೂ ಜೀವ ಹೋದ ಬಳಿಕ ಎಲ್ಲವೂ ಲೌಖಿಕ. ಒಂದು ಸೊಂಟ ಬಳ್ಳಿಯೂ ಕೂಡ ನಮ್ಮ ಜೊತೆ ಬರದು. ಆದ್ದರಿಂದ ಪಾರಮಾರ್ಥ ಬದುಕಿಗೆ ಪೂರಕವಾದ ಬದುಕು ಸವೆಸಿ, ಸ್ವಾರ್ಥ ರಹಿತವಾಗಿ ಎಲ್ಲರ ಪ್ರೀತಿಗೆ ಪಾತ್ರವಾಗುವುದುದೇ ಜೀವನ. ಮಡಂತ್ಯಾರಿನಲ್ಲಿ ಸರ್ವ ಧರ್ಮೀಯರ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮ ಮಾದರಿಯಾದುದು ಎಂದವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಶೆಟ್ಟಿ ಪದೆಂಜಿಲ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿದ್ದ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದ ಅರ್ಚಕ ಶ್ರೀಧರ ರಾವ್ ಪೇಜಾವರ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಭಗವದ್ಗೀತೆಯ 18 ಅಧ್ಯಾಯಗಳನ್ನು 18 ತಿಂಗಳಲ್ಲಿ ಕಳಿಸಿಕೊಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಈ ಬಗ್ಗೆ ಆಸಕ್ತರು ತಮ್ಮ ಮಕ್ಕಳನ್ನು ನಿರಹಾರಿಗಳಾಗಿ ನಿಗಧಿತ ಸಮಯಕ್ಕೆ ಕಳುಹಿಸಿಕೊಡುವಲ್ಲಿ ಆಲೋಚಿಸಬೇಕು ಎಂದು ಯೋಜನೆ ಪ್ರಕಟಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್ ಮಾಲಕ ಉಮೇಶ್ ಶೆಟ್ಟಿ, ಶ್ರೀದುರ್ಗಾ ಟೆಕ್ಸ್‌ಟೈಲ್ಸ್ ಮಾಲಕ ಮೋಹನ ಚೌದರಿ, ಶುಭ ಕೋರಿದರು. ಇನ್ನೊರ್ವ ಮುಖ್ಯ ಅತಿಥಿ ಮೋಹನ್ ಶೆಟ್ಟಿ ನರಳ್‌ದಡ್ಕ ಮೂಡುಪಡುಕೋಡಿ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಮುಗೆರೋಡಿ ಸಂಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಸ್ಥಾಪನೆ ಇದುವರೆಗೆ ನಡೆದುಬಂದ ದಾರಿ ಬಗ್ಗೆ ತಿಳಿಸಿದರು. ತುಳಸಿದಾಸ್ ಪೈ ಮಡಂತ್ಯಾರು ಮತ್ತು ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವೀರೇಂದ್ರ ಕುಮಾರ್ ವಂದನಾರ್ಪಣೆಗೈದರು.
ಸಮಾರಂಭದ ಅತಿಥಿಗಳಾಗಿದ್ದ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಸೆ. ೧೫ ಮತ್ತು ೧೬ ರಂದು ಭೇಟಿ ನೀಡಿ ಶುಭಕೋರಿದರು.
ಪೂವಾಹ್ನ 11.30 ರಿಂದ ಶ್ರೀ ಮಹಾಗಣಪತಿ ದೇವರ ಸನ್ನಿದಾನದಲ್ಲಿ ಮಹಾಪೂಜೆ, ಪ್ರಸಾದ ವಿತರಣೆನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಿತು.
ವೈಭವದ ಶೋಭಾಯಾತ್ರೆ:
ಅಂದು ಸಂಜೆ ಶ್ರೀ ಗಣೇಶ್ ಮೂರ್ತಿಯ ವೈಭವದ ಶೋಭಾಯಾತ್ರೆ ನಡೆಯಿತು. ಮಡಂತ್ಯಾರು ಶ್ರೀ ಗಣೇಶ್ ಮಂದಿರದಿಂದ ಹೊರಟು, ಕೊಲ್ಪದಬೈಲು ಸಾಗಿ, ಮರಳಿ ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದ ಕೆರೆಯಲ್ಲಿ ಜಲಸ್ಥಂಬನ ಕಾರ್ಯ ಭಕ್ತಿ ಭಾವದೊಂದಿಗೆ ನಡೆಯಿತು.
ಆಕರ್ಷಕ ಟ್ಯಾಬ್ಲೋ ಜನಾಕರ್ಷಣೆ ಪಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.