ಈಜುಗಾರ ಮುಹಮ್ಮದ್ ಬಂದಾರು ರಿಗೆ ಸನ್ಮಾನ

ಬಂದಾರು : ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಜಿಲ್ಲಾಡಳಿತದಿಂದ ಜೀವ ರಕ್ಷಕರಾಗಿ ನಿಯೋಜನೆಗೊಂಡಿರುವ ಈಜುಪಟು ಮುಹಮ್ಮದ್ ಬಂದಾರು ರಿಗೆ ಶ್ರೀ ಸದಾಶಿವ ಯುವಕ ಮಂಡಲ ಮೈರೋಳ್ತಡ್ಕ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಬಟ್ಲಡ್ಕ ಜಮಾಅತ್ ಎಸ್‌ವೈಯಸ್ ಅಧ್ಯಕ್ಷ ಮತ್ತು ಕುಪ್ಪೆಟ್ಟಿ ಶಾಖೆಯ ಜೊತೆ ಕಾರ್ಯದರ್ಶಿಯೂ ಆಗಿರುವ ಮುಹಮ್ಮದ್ ಬಂದಾರು ಅವರು ಈಗಾಗಲೇ ತಮ್ಮ ಅಮೂಲ್ಯ ಸೇವೆ ನೀಡುತ್ತಾ ಜಾತಿ, ಮತ, ಧರ್ಮವನ್ನೂ ಮೀರಿದ ಮಾನವೀಯತೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗುವವರನ್ನು ರಕ್ಷಿಸಿದ್ದೂ ಮಾತ್ರವಲ್ಲದೆ, ಮುಳುಗಿ ಮೃತಪಟ್ಟವರ ಮೃತದೇಹಗಳನ್ನು ಮೇಲಕ್ಕೆತ್ತುವಲ್ಲೂ ಅವರು ಸೇವೆ ನೀಡಿದ್ದಾರೆ.
ಇವರಿಗೆ ಇದೇ ತಿಂಗಳು ಪದ್ಮುಂಜ ಸಹಕಾರಿ ಸಂಘ ಮತ್ತು ಕೇರಳದ ಮರ್ಕಝ್ ಸಂಸ್ಥೆಯ ವತಿಯಿಂದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಸಮ್ಮುಖ ಸನ್ಮಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.