ಎಸ್ಸೆಸ್ಸೆಫ್ ಪದ್ಮುಂಜ ಶಾಖೆಯಿಂದ ಪದ್ಮುಂಜ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1

ಪದ್ಮುಂಜ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಪದ್ಮುಂಜ ಶಾಖಾ ವತಿಯಿಂದ ರಾಜ್ಯ ಸಮಿತಿಯ ಮೂವತ್ತನೇ ವರ್ಷಾಚರಣೆಯ ಪ್ರಯುಕ್ತ ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಸೆಟ್ಟ್‌ವೊಂದು ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷ ಅಶ್ರಫ್ ಅಂತರ ಎಸ್‌ವೈಎಸ್ ರಾಜ್ಯ ನಾಯಕ ಹಾಗೂ ಎಸ್‌ಡಿಎಂಸಿ ಸದಸ್ಯ ಕಾಸಿಂ ಪದ್ಮುಂಜ, ಎಸ್‌ಎಸ್‌ಎಫ್ ಜಿಲ್ಲಾ ಪ್ರ. ಕಾರ್ಯದರ್ಶಿ ಹಾಗೂ ಎಸ್‌ಡಿಎಂಸಿ ಸದಸ್ಯ ಕಲಂದರ್ ಪದ್ಮುಂಜ, ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷ ಫಾರೂಕ್ ಸಅದಿ ಮಲೆಂಗಲ್ಲು, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮಲೆಂಗಲ್ಲು, ಎಸ್‌ಡಿಎಂಸಿ ಅಧ್ಯಕ್ಷ ಯುವರಾಜ ಇಂದ್ರ, ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್, ಕಣಿಯೂರು ಗ್ರಾ. ಪಂ. ಅಧ್ಯಕ್ಷ ಸುನಿಲ್ ಸಾಲ್ಯಾನ್ ಉಪಸ್ಥಿತರಿದ್ದು, ಕೊಡುಗೆ ಸ್ವೀಕರಿಸಿದರಲ್ಲದೆ ಇದೊಂದು ಮಾದರಿಯಾದ ಕೊಡುಗೆ ಎಂದು ಕೊಂಡಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.