ಸೆ.23: ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಸುತ್ತುಪೌಳಿಯ ಶಿಲಾನ್ಯಾಸ

ಬೆಳಾಲು: ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಸುತ್ತುಪೌಳಿಯ ಶಿಲಾನ್ಯಾಸ ಸೆ.೨೩ ರಂದು ನಡೆಯಲಿದೆ. ಕ್ಷೇತ್ರದ ಡೊಂಬಯ್ಯ ಗೌಡ ಶ್ರೀಮತಿ ಬಾಲಕ್ಕ ಶಿಲಾನ್ಯಾಸ ನೆರವೇರಿಸಲಿದ್ದು, ಕ್ಷೇತ್ರದ ವ್ಯವಸ್ಥಾಪಕರಾದ ಹರೀಶ್ ಆರಿಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಜಿರೆ ಗಣೇಶ್ ಫ್ಲವರ್ ಸ್ಟಾಲ್‌ನ ಶಿವಶಂಕರ್ ಕುಡ್ವ, ಉದ್ಯಮಿ ಮೋನಪ್ಪ ಸಿರಿಯಾನ್ ಬಂದಾರು, ಬೆಳಾಲು ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ, ಬೆಳಾಲು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಗೌಡ ನೂಜಿಲ, ವಸಂತ ಗೌಡ ಆರಿಕೋಡಿ, ಬಂದಾರು ಗ್ರಾ.ಪಂ ಅಧ್ಯಕ್ಷ ಉದಯ.ಬಿ.ಕೆ, ಕೊಯ್ಯೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ವಿ.ಎನ್, ಬೆಳಾಲು ಗ್ರಾ.ಪಂ ಸದಸ್ಯರಾದ ಸುರೇಂದ್ರ, ಜಯಂತ್ ಗೌಡ, ಉದ್ಯಮಿ ಚಂದಪ್ಪಗೌಡ ಬೆರ್ಕೆ ಮತ್ತಿತರರು ಗೌರವ ಉಪಸ್ಥಿತಲಿರುವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.