ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿ.ಎಮ್ ಪರಿಹಾರ ನಿಧಿಗೆ ನಿಧಿ ಸಮರ್ಪಣೆ.

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಡಿಕೇರಿಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವಾಗಲು ಶ್ರೀ ಕ್ಷೇತ್ರ ರೂ. 2 ಕೋಟಿ ಮೊತ್ತದ ಡಿಮಾಂಡ್ ಡ್ರಾಫ್ಟ್‌ನ್ನು ಸಿ.ಎಮ್ ಹೆಚ್.ಡಿ.ಕುಮಾರಸ್ವಾಮಿ ರವರಿಗೆ  ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ಕಛೇರಿ ಕೃಷ್ಣಾದಲ್ಲಿ ಸೆ.14 ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅತಿವೃಷ್ಠಿ ಪೀಡಿತ 1175 ಕುಟುಂಬಗಳಿಗೆ ವಿವಿಧ ಉದ್ದೇಶಗಳಿಗೆ ತಲಾ ರೂ. 25000/- ದಿಂದ ರೂ. 65,೦೦೦/-ವರೆಗೆ ಮಂಜೂರು ಮಾಡಿರುವುದನ್ನು  ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಪರಿಹಾರ ನಿಧಿಗೆ ಮೊತ್ತವನ್ನು ಸ್ವೀಕರಿಸಿದ  ಮುಖ್ಯಮಂತ್ರಿಗಳು ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಾ, ಧರ್ಮಸ್ಥಳದ ಧರ್ಮಾಧಿಕಾರಿಯವರು ರೂ. 8 ಕೋಟಿ ಮೊತ್ತದ ನೇರ ಪರಿಹಾರ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.2 ಕೋಟಿ ಮೊತ್ತವನ್ನು ನೀಡುತ್ತಿರುವ ಕುರಿತಂತೆ ಸರಕಾರದ ಪರವಾಗಿ ಅಭಿನಂದನೆಗಳನ್ನು ಸೂಚಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ವತಿಯಿಂದ ಕೊಡಗಿನಲ್ಲಿ  ಅತಿವೃಷ್ಠಿಯಿಂದ ಉಂಟಾಗಿರುವ ಹಾನಿಯ ಕುರಿತಂತೆ ಮತ್ತು ಅಗತ್ಯವಿರುವ ಪರಿಹಾರದ ಅವಶ್ಯಕತೆಯ ಕುರಿತಂತೆ ಸವೇಕ್ಷಣಾ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಕೊಡಗು ಪರಿಹಾರಕ್ಕೆ ಗರಿಷ್ಠ ನಿಧಿಯನ್ನು ನೀಡುವಂತೆ ಕೋರಲಾಯಿತು.

ನಿಯೋಗದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಸಹೋದರ ಡಿ|ಸುರೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕರುಗಳಾದ ಮಹಾವೀರ ಅಜ್ರಿ, ಶಾಂತಾರಾಮ್ ಆರ್. ಪೈ, ಆನಂದ ಸುವರ್ಣ, ಕೊಡಗು ಜಿಲ್ಲಾ ನಿರ್ದೇಶಕ  ಯೋಗೀಶ್, ಯೋಜನಾಧಿಕಾರಿ ಅಕ್ಷತಾ, ಮೇಲ್ವಿಚಾರಕಿ ಉಮಾ, ಗುಣಪಾಲ ಜೈನ್ ಮತ್ತು ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತ ಸಹಾಯಕ ಕೃಷ್ಣ ಸಿಂಗ್‌ರವರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.