ಮದ್ದಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಮದ್ದಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ವತಿಯಿಂದ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೆಂಕಟೇಶ್ ಭಟ್, ಆಲಂತಿಲ ಇವರ ಪೌರೋಹಿತ್ಯದಲ್ಲಿ ಮದ್ದಡ್ಕ ವೆಲ್‌ಕಂ ಯೂತ್ ಕ್ಲಬ್‌ನ ಬಯಲು ರಂಗ ಮಂದಿರದಲ್ಲಿ ಸೆ.12 ರಂದು ಜರುಗಿತು.
ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್.ಗಂಗಾಧರ ರಾವ್ ಕೆವುಡೇಲು ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಜಮ್ಮು ಕಾಶ್ಮೀರ ಸಾಯಿಮಂದಿರದ ಸುಕೇತರ್ ಶ್ರೀ ಸಾಯಿ ಮಾತಾಜಿ, ಕುವೆಟ್ಟು ಕ್ಷೇತ್ರದ ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ, ತುಳು ಶಿವಳ್ಳಿಸಭಾ ಕುವೆಟ್ಟು ವಲಯದ ಅಧ್ಯಕ್ಷ ಅಶೋಕ ಭಾಗಿಣ್ಣಾಯ, ಉಜಿರೆ ಉದ್ಯಮಿ ಶ್ರೀಮತಿ ಗೌತಮಿ ಜಿ ಭಂಡಾರ್ಕಾರ್, ಮದ್ದಡ್ಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಇರ್ವತ್ರಾಯ ತಂಗೋಯಿ ಉಪಸ್ಥಿತರಿದ್ದರು.
ಸೆ.13 ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲೆ ಬೆಳ್ತಂಗಡಿ ಉಪನ್ಯಾಸಕ ರಾಜೇಂದ್ರ ಅಮ್ಮುಣ್ಣಾಯ, ಕಿಲ್ಲೂರು ಸ್ಪಂದನಾ ಕ್ಲೀನಿಕ್‌ನ ಡಾ| ವಾಣಿ ಸುಗುಣ ಕುಮಾರ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಬೆಳ್ತಂಗಡಿ ಮಂಜುಶ್ರೀ ಜೇಸಿಐ  ಪೂರ್ವಾಧ್ಯಕ್ಷ ತುಕಾರಾಮ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.