ಬೆಳ್ತಂಗಡಿ ಜೇಸಿ ಸಪ್ತಾಹ ನಿನಾದ ಆಮಂತ್ರಣ ಪತ್ರಿಕೆ ಶ್ರೀ ಕ್ಷೇತ್ರದಲ್ಲಿ ಬಿಡುಗಡೆ

ಬೆಳ್ತಂಗಡಿ : ಜೇಸಿಐ ಬೆಳ್ತಂಗಡಿ ಮಂಜುಶ್ರೀಯ 41 ನೇ ವರ್ಷದ ಜೇಸಿ ಸಪ್ತಾಹ ನಿನಾದ 2018 ಸೆ.21 ರಿಂದ ಸೆ.27 ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನ ಬೆಳ್ತಂಗಡಿಯಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ  ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷರಾದ ಅಶೋಕ್ ಕುಮಾರ್ ಬಿ.ಪಿ., ಸುಭಾಶ್ಚಂದ್ರ ಎಂ.ಪಿ., ತುಕರಾಮ್, ಕೇಶವ ಪೈ, ಶ್ರೀನಾಥ್ ಕೆ.ಎಂ., ವಲಯಾಧಿಕಾರಿಗಳಾದ ಚಿದಾನಂದ ಇಡ್ಯಾ, ವಸಂತ ಶೆಟ್ಟಿ ಶ್ರದ್ಧಾ, ಜೇಸಿರೇಟ್ ಪೂರ್ವಾಧ್ಯಕ್ಷೆ ಪದ್ಮಶ್ರೀ ಎ ಕುಮಾರ್, ನಿಕಟಪೂರ್ವಾಧ್ಯಕ್ಷ ಸಂತೋಷ್ ಕೋಟ್ಯಾನ್, ಉಪಾಧ್ಯಕ್ಷ ರಂಜಿತ್ ಹೆಚ್.ಡಿ, ಸಪ್ತಾಹ ಸಂಯೋಜಕ ಸ್ವರೂಪ್ ಶೇಖರ್, ಸದಸ್ಯರಾದ ಗಣೇಶ್ ಶಿರ್ಲಾಲ್, ಶೀತಲ್ ಜೈನ್, ಸುಶೀಲ್ ಕುಮಾರ್, ವಿನೋದ್ ಆಳ್ವಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.