ಪಡ್ಡಂದಡ್ಕ ಮದರಸ ವಿವಾದ ಇತ್ಯರ್ಥ

Advt_NewsUnder_1
Advt_NewsUnder_1
Advt_NewsUnder_1

ವೇಣೂರು : ಇಲ್ಲಿನ ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯ ಮದರಸದ ವಿಚಾರದಲ್ಲಿ ಎರಡು ಬಣಗಳ ನಡುವೆ ಕಳೆದ ಎಂಟು ವರ್ಷದಿಂದ ಹೊಡೆದಾಟ ಅರೋಪ ಪ್ರತ್ಯರೋಪಗಳು ಜಿಲ್ಲೆ ಹಾಗೂ ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಇದು ತಾಲೂಕ್ ಹಾಗೂ ಹೈಕೋರ್ಟ್ ಮೆಟ್ಟಿಲು ಏರಿತು.
ಇದಕ್ಕೆ ಸೌರ್ಹಾದಯುತ ಪರಿಹಾರಕ್ಕಾಗಿ ಜಮಾತಿನ ಪ್ರಮುಖರಾದ ಕೆ.ಇಸ್ಮಾಯಿಲ್ ಪೆರಿಂಜೆ, ಮಾಜಿ ಅಧ್ಯಕ್ಷೆ ಖಾಲಿದ್ ಪೂಲಬೆ ಮತ್ತು ಮೋನು ಗಾಂಧಿನಗರ ರವರ ಅವಿತರ ಶ್ರಮದಿಂದ ಮಸೀದಿಯ ಮಾಜಿ ಅಧ್ಯಕ್ಷೆ ಪಿ.ಎ. ಇಬ್ರಾಹೀಂರವರ ಅಧ್ಯಕ್ಷೆಯಲ್ಲಿ ಸೆ. 9 ರಂದು ಸಭೆ ನಡೆಯಿತು. ಜಮಾತಿಯ ಹಿರಿಯ ಸದಸ್ಯರ ಕೂಡುವಿಕೆಯಲ್ಲಿ ಮದರಸದ ಸಿಲೇಬಸಿನ ವಿಚಾರಕ್ಕೆ ಸೌರ್ಹಾದತೆಯ ರಾಜಿ ಸಂದಾನ ಮಾಡಲಾಯಿತು.
ಸಭೆಯಲ್ಲಿ ಮಸೀದಿಯ ಅಧ್ಯಕ್ಷ ಹಾಜಿ. ಯು.ಕೆ ಮೊಹಮ್ಮದ್, ಬಿ. ಮೊಹಮ್ಮದ್ ಪಿ.ಎಚ್, ಅಹಮ್ಮದ್ ಹುಸೈನ್ ಎನ್.ಜಿ ಹಮೀದ್ ಸೇರಿದಂತೆ, ಜಮಾತಿನ ಪರವಾಗಿ ಮೊಹಮ್ಮದ್ ಶಾಪಿ, ಪಿ.ಎಚ್ ಅಬ್ದುಲ್ ಹಮೀದ್, ಡಲ್ಮಾ ಅಬ್ದುಲ್ ರಹೀಮಾನ್ ಹೈದರ್ ಕಿರೋಡಿ, ಪಿ.ಎಸ್ ಶೆಬೀರ್.ಪಿ,ಪಿ.ಎಸ್ ಮಹಮ್ಮದ್, ಪಿ.ಎಸ್ ನಜೀರ್, ಕೆ. ಅಬ್ದುಲ್ ರಹೀಮಾನ್ ಕಟ್ಟೆ, ಚರ್ಚೆನಲ್ಲಿ ಭಾಗವಹಿಸಿ ಸಹಕರಿಸಿದ್ದರು. ಮಸೀದಿಯ ಖತೀಬ್ ಇಸಾಕ್ ಫೈಯಿ ಹಾಗೂ ಸರಪುದ್ದೀನ್ ತಂಞಳ್ ರವರಿಂದ ಪ್ರಾರ್ಥಣೆ ಜರುಗಿತು.
ಕೆ. ಇಸ್ಮಾಯಿಲ್ ಪ್ರಾಸ್ತಾಮಿಕ ಮಾತನಾಡಿ, ಸ್ವಾಗತಿಸಿದರು ಹೆಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.