ತಾಲೂಕಿನೆಲ್ಲೆಡೆ ಸಂಭ್ರಮದ ಗಣೇಶ ಚತುರ್ಥಿ ಆಚರಣೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿ ವತಿಯಿಂದ 8ನೇ ವರ್ಷದ ಸಾರ್ವಜನಿಕ ಶ್ರೀ ಗೌರಿ ಗಣೇಶೊತ್ಸವವು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನಲ್ಲಿ ವಿಜ್ರಂಭಣೆಯಿಂದ ಜರುಗಿತು.


ನಿಡ್ಲೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಿಡ್ಲೆ ಇದರ ವತಿಯಿಂದ 30ನೇ ವರ್ಷದ ಶ್ರೀ ಗಣೇಶೋತ್ಸವವು ಸಭಾಧ್ಯಕ್ಷರಾದ ವೆಂಕಟರತ್ನ ರಾವ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಬೆಳಿಗ್ಗೆ ಗಣಹೋಮ, ಮೂರ್ತಿ ಪ್ರತಿಷ್ಠಾಪನೆ, ಮಹಾಪೂಜೆ, ಪ್ರಸಾದ ವಿತರಣೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.


ಮಿತ್ತಬಾಗಿಲು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಿತ್ತಬಾಗಿಲು ಇದರ ವತಿಯಿಂದ 34 ನೇ ವರ್ಷದ ಶ್ರೀ ಗಣೇಶೋತ್ಸವವು ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಗೋಪುರದಲ್ಲಿ ಸಭಾಧ್ಯಕ್ಷರಾದ ಕೆ.ಕೃಷ್ಣಪ್ಪ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಬೆಳಿಗ್ಗೆ ಗಣಹೋಮ, ಮೂರ್ತಿ ಪ್ರತಿಷ್ಠಾಪನೆ, ಮಹಾಪೂಜೆ, ಪ್ರಸಾದ ವಿತರಣೆ, ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.


ಹುಣ್ಸೆಕಟ್ಟೆ: ಶ್ರೀರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇದರ ವತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ರಾಜೇಶ್ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಜರುಗಿತು.


ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗಣೇಶೊತ್ಸವವು ಶಂಕರ ಹೆಗ್ಡೆ ರವರ ಅಧ್ಯಕ್ಷತೆಯಲ್ಲಿ ಸಂತೆಕಟ್ಟೆ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು.


ಗೇರುಕಟ್ಟೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ, ಗೇರುಕಟ್ಟೆ ಇದರ ವತಿಯಿಂದ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಗೇರುಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ವಿಜೃಂಭಣೆಯಿಂದ ಕುಂಟಿನಿ ರಾಘವೇಂದ್ರ ಬಾಂಗೀಣ್ಣಾಯರವರ ಪೌರೋಹಿತ್ಯದಲ್ಲಿ ವಿಧಿವತ್ತಾಗಿ ನಡೆಯಿತು . ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.


ಮರೋಡಿ: ಮರೋಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 6ನೇ ವರ್ಷದ ಶ್ರೀ ಗಣೇಶೊತ್ಸವವು ರತ್ನಾಕರ ಬುಣ್ಣನ್ ಪರಬೆಟ್ಟು ರವರ ಅಧ್ಯಕ್ಷತೆಯಲ್ಲಿ, ಯಜ್ಞನಾರಾಯಣ ಭಟ್ ಕೇಳ-ಬೊಟ್ಟ ಇವರ ಪೌರೋಹಿತ್ಯದಲ್ಲಿ ಮರೋಡಿ ಪಲಾರಗೋಳಿ ಮೈದಾನದಲ್ಲ್ಲಿ ಜರುಗಿತು.


 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.