ನಾರಾವಿ ಕಾಲೇಜು : ಅದ್ದೂರಿಯ ಕಲಾ ಸೊಬಗು – 2018

Advt_NewsUnder_1
Advt_NewsUnder_1

ನಾರಾವಿ : ಸಂತ ಅಂತೋನಿ ಕಾಲೇಜು, ನಾರಾವಿಯಲ್ಲಿ ಅಂತರ್ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕಲಾ ಸೊಬಗು- 2018 ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್‍ಯಕ್ರಮದ ಉದ್ಘಾಟನೆಯನ್ನು ನ್ಯಾಷನಲ್ ಕ್ಯಾಥೋಲಿಕ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಸುಶೀಲ್ ನೊರೊನ್ಹಾ ನೆರವೇರಿಸಿ, ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಯನ್ನು ಹೊಂದಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂದನೀಯ ಸ್ವಾಮಿ ಸೈಮನ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ತಾ.ಪಂ. ಸದಸ್ಯ ಜೋಯಲ್ ಮೆಂಡೋನ್ಸಾ, ಶ್ರೀಮತಿ ರೀಟಾ ಪಿಂಟೊ, ಚರ್ಚ್ ಕಾರ್‍ಯದರ್ಶಿ, ಸಂಜಯ್ ಮಿರಾಂದ, ಆಡಳಿತ ಮಂಡಳಿಯ ಸದಸ್ಯ ಹಾಗೂ ಉಪ ಪ್ರಾಂಶುಪಾಲ ಸಂತೋಷ್ ಸಲ್ಡಾನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಳು ಚಲನಚಿತ್ರ ನಟ ಸತೀಶ್ ಬಂದಾಲೆ, ಪಚಿನಡ್ಕ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ ಪದವಿ ಮಟ್ಟದಲ್ಲಿ ತೃತೀಯ ರ್‍ಯಾಂಕ್ ಪಡೆದ ಕು. ಅಭಿನಂದಿಸಿ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕರಾದ ಶ್ರೀಮತಿ ದೀಕ್ಷಾ ಸ್ವಾಗತಿಸಿ, ಪ್ರದೀಪ್ ವಂದಿಸಿದರು. ಉಪನ್ಯಾಸಕ ಸಂತೋಷ್ ಕಾರ್‍ಯಕ್ರಮ ನಿರೂಪಿಸಿದರು. ವಿವಿಧ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಸೇಕ್ರೆಡ್ ಹಾರ್ಟ್ ಕಾಲೇಜು, ಬಜಗೋಳಿ ಹಾಗೂ ಕಾಲೇಜು ವಿಭಾಗದಲ್ಲಿ ವಾಣಿ ಪಿ. ಯು. ಕಾಲೇಜು ಬೆಳ್ತಂಗಡಿ ಸಮಗ್ರ ಪ್ರಶಸ್ತಿಯನ್ನು ಹಾಗೂ ಜೈನ್ ಪಿ. ಯು. ಕಾಲೇಜು, ಮೂಡಬಿದ್ರಿ ಪಡೆದುಕೊಂಡವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.