HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಇದರ ವತಿಯಿಂದ ೮ನೇ ವರ್ಷದ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೆ.12 ರಂದು ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಮೂಡಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶ್ರೀ ಗಣೇಶೋತ್ಸವನ್ನು ವಿಶ್ವದೆಲ್ಲೆಡೆ ಆಚರಿಸುತ್ತಿದ್ದು, ಇಂತಹ ಉತ್ಸವಗಳು ಊರಿನ ಸಂಘಟನೆ ಮತ್ತು ಜನರ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಪ್ರೇರಣೆಯಾಗಿದೆ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಗಣೇಶೋತ್ಸವವನ್ನು ಇಲ್ಲಿ ಯಶಸ್ವಿಯಾಗಿ ಭಕ್ತರ ಸಹಕಾರದಲ್ಲಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ, ಇಂತಹ ಉತ್ಸವಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆಯವರು ಮಾತನಾಡಿ ಹರೀಶ್ ಕುಮಾರ್ ಇಂದು ವಿಧಾನ ಪರಿಷತ್ ಸದಸ್ಯರಾಗುವಲ್ಲಿ ಮಹಾಗಣಪತಿಯ
ಸಂಪೂರ್ಣ ಆಶೀರ್ವಾದ ಕಾರಣ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಎಲ್.ಸಿ ಹಾಗೂ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ ಕಳೆದ ಎಂಟು ವರ್ಷಗಳಿಂದ ಇಲ್ಲಿ ಶ್ರೀ ಗೌರಿ ಗಣೇಶೋತ್ಸವ ಎಲ್ಲರ ಸಹಕಾರದಲ್ಲಿ ನಡೆಯುತ್ತಿದೆ. ಈ ಬಾರಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ಅನ್ನಸಂತರ್ಪಣೆಗೆ ಸಹಕಾರ ದೊರಕಿದೆ ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಎನ್. ಜೀವಂಧರ್ ಕುಮಾರ್ ನಾರಾವಿ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬೆಳಗ್ಗೆ ಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ನಾರಾಯಣ ಭಟ್ ಮುಗುಳಿ, ಸುಭಾಶ್ಚಂದ್ರ ರೈ, ಬಿ.ರಾಜಶೇಖರ ಅಜ್ರಿ, ರಾಮಚಂದ್ರ ಗೌಡ, ಜಗದೀಶ್ ಡಿ, ಈಶ್ವರ ಭಟ್, ಕೃಷ್ಣಪ್ಪ ಪೂಜಾರಿ, ಯೋಗೀಶ್ ಕುಮಾರ್, ನಾಮದೇವ ರಾವ್, ಪಿ.ಕೆ ರಾಜು ಪೂಜಾರಿ, ಮೋಹನ್ ಶೆಟ್ಟಿಗಾರ್, ಧರಣೇಂದ್ರ ಕುಮಾರ್, ಶೈಲೇಶ್ ಕುಮಾರ್, ಈಶ್ವರ ಭೈರ, ಸೋಮೇ ಗೌಡ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.