ಹೋಲಿ ರೆಡೀಮರ್ ಚರ್ಚ್‌ನಲ್ಲಿ ಮೋಂತಿ ಹಬ್ಬದ ಸಂಭ್ರಮ

ಬೆಳ್ತಂಗಡಿ: ಇಲ್ಲಿಯ ಹೋಲಿ ರೆಡೀಮರ್ ಚರ್ಚ್ ನಲ್ಲಿ ಕನ್ಯಾ ಮರಿಯಮ್ಮ ಹುಟ್ಟು ಹಬ್ಬ ಹಾಗೂ ತೆನೆ ಹಬ್ಬದ ಪ್ರಯುಕ್ತ ತೆನೆಗಳ ಆಶೀರ್ವಚನ, ಆಕರ್ಷಕ ಮೆರವಣಿಗೆ, ದಿವ್ಯಬಲಿ ಪೂಜೆ ಮತ್ತು ವಾಹನ ಮಾಲಕ-ಚಾಲಕರಿಗೆ ವಿಶೇಷ ಆಶೀರ್ವಚನ ಕಾರ್ಯಕ್ರಮವು ಸೆ.8 ರಂದು ಜರುಗಿತು.
ಬೆಂಗಳೂರು ಏಸುಸಭೆಯ ಪ್ರಾಂತ್ಯಾಧಿಕಾರಿ ಸ್ಟೇನಿ ಡಿ’ಸೋಜಾ ರವರು ಆಶೀರ್ವಚನ ನೀಡಿದರು. ಹೋಲಿ ರೆಡೀಮರ್ ಚರ್ಚ್ ಧರ್ಮಗುರುಗಳಾದ ಬೊನವೆಂಚರ್ ನಜ್ರೆತ್, ಫಾ| ಅರುಣ್ ಡಿ’ಸೋಜಾ, ಸಹಾಯಕ ಧರ್ಮಗುರುಗಳಾದ ರೋಶನ್ ಡಿ’ಕುನ್ಹಾ ಉಪಸ್ಥಿತರಿದ್ದರು. ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.