ಹತ್ಯಡ್ಕ: ಹಲ್ಲೆ ಆರೋಪಿಗಳಿಂದ ಪೊಲೀಸರ ಕೊಲೆ ಯತ್ನ

Advt_NewsUnder_1
Advt_NewsUnder_1
Advt_NewsUnder_1
ಪ್ರಮೀಳಾ                                                ಜಗದೀಶ ಯಾನೆ ಮಹೇಶ                             ಸವಿತಾ ಯಾನೆ ಲೀಲಾವತಿ

ಹತ್ಯಡ್ಕ: ಹಲ್ಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ತೆರಳಿದ್ದ ಪೊಲೀಸ್ ಸಿಬ್ಬಂದಿಯನ್ನೇ ಕೊಲ್ಲಲು ಯತ್ನಿಸಿದ ಆಘಾತಕಾರಿ ಘಟನೆ ಸೆ.6 ರಂದು ಹತ್ಯಡ್ಕ ಗ್ರಾಮದ ಮೂಜಿನಾಡಿನಲ್ಲಿ ನಡೆದಿದೆ. ಹಣದ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಸವಿತಾ ಗೋರೆ ರವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ ಪರಿಣಾಮ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಆಕೆಯ ಪುತ್ರ ಅಭಿಷೇಕ್ ಗೋರೆ, ಪ್ರಮೀಳಾ ಹಾಗೂ ಜಗದೀಶ್ ರವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಅವಿನಾಶ್ ರವರು ಸಿಬಂದಿಯೊಂದಿಗೆ ಮೂಜಿನಾಡುನಲ್ಲಿರುವ ಆರೋಪಿ ಪ್ರಮೀಳಾ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸರನ್ನು ಕಂಡ ಪ್ರಮೀಳಾ ಹಾಗೂ ಆಕೆಯ ತಾಯಿ ಸವಿತಾ ಯಾನೆ ಲೀಲಾವತಿ ನಮ್ಮನ್ನು ಬಂಧಿಸಲು ನೀವು ಯಾರು? ನಿಮಗೆ ಏನು ಅಧಿಕಾರವಿದೆ ಎಂದು ಹೇಳಿ. ನಿಮ್ಮನ್ನು ಕೊಂದು ಬಿಡುತ್ತೇ ಎಂಬ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಮತ್ತೋರ್ವ ಆರೋಪಿ ಜಗದೀಶ್ ಯಾನೆ ಮಹೇಶ ಕೊಲ್ಲುವ ಉದ್ದೇಶದಿಂದ ಕೈಯ್ಯಲಿ ದೊಣ್ಣೆ ಹಿಡಿದುಕೊಂಡು ಬಂದು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಿಬಂದಿಯ ಮೊಬೈಲನ್ನು ಜಖಂಗೊಳಿಸಿದ್ದಾನೆ.
ಜತೆಗೆ ಸವಿತಾ ಯಾನೆ ಲೀಲಾವತಿ ಕತ್ತಿ ಹಿಡಿದು ಬಿಸಿದಾಗ ಪೊಲೀಸ್ ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಸುಕನ್ಯಾ ರವರಿಗೆ ಗಾಯಗಳಾಗಿವೆ. ಬಳಿಕ ಜಗದೀಶ ದೊಣ್ಣೆಯಿಂದ ಹೊಂಗಾರ್ಡ್ ಸಿಬಂದಿ ಮಮತಾರವರಿಗೆ ಹೊಡೆಯಲು ಯತ್ನಿಸಿದಾಗ ಅವರು ಬಾಗಿದ್ದು, ಅವರ ಭೂಜಕ್ಕೆ ಗಾಯವಾಗಿದೆ. ಅವರ ಹೊಟ್ಟೆಗೂ ತುಳಿದ ಕಾರಣ ಅವರನ್ನು ಆಸ್ಪತ್ರೆಗ ದಾಖಲಿಸಲಾಗಿದೆ. ಸವಿತಾ ಯಾನೆ ಲೀಲಾವತಿ, ಪ್ರಮೀಳಾ, ಜಗದೀಶ ಹಾಗೂ ಅಭಿಷೇಕ್ ಗೋರೆಯನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.