ಉಣ್ಣಿಕುಟ್ಟನ್ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗೆ ಬಿರುಸಿನ ಕಾರ್ಯಾಚರಣೆ

ಕುಪ್ಪೆಟ್ಟಿ : ಇಲ್ಲಿಗೆ ಸಮೀಪದ ಉರುವಾಲು ಗ್ರಾಮದ ಕುಪ್ಪೆಟ್ಟಿ ಸೇತುವೆಯ ಬಳಿ ಹೊಳೆಯಲ್ಲಿ ಸೆ.3 ರಂದು ಸಂಜೆ ಕೇರಳದ ಎರ್ನಾಕುಲಂ ನಿವಾಸಿ ಉಣ್ಣಿಕುಟ್ಟನ್ (35) ಎಂಬವರ ಮೃತದೇಹ ಪತ್ತೆ ಆಗಿದ್ದು, ಇದೊಂದು ಕೊಲೆ ಕೃತ್ಯ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಪ್ಪೆಟ್ಟಿ ಹೊಳೆಯಲ್ಲಿ ಕಲ್ಲು ಬಂಡೆಯ ಮಧ್ಯೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿತ್ತು. ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಮರಣೋತ್ತರ ವರದಿಯಲ್ಲಿ ಗಾಯಗೊಂಡು ಸಾವು ನಡೆದಿದೆ ಎಂದು ತಿಳಿಸಲಾಗಿದ್ದು, ಹೀಗಾಗಿ ಇದೊಂದು ಕೊಲೆ ಕೃತ್ಯ ಎಂಬ ನಿರ್ಧಾರಕ್ಕೆ ಬಂದಿರುವ ಉಪ್ಪಿನಂಗಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಮೃತದೇಹದಲ್ಲಿ ಗಾಯ ಕಂಡು ಬಂದಿತ್ತು, ಅದಾಗ್ಯೂ ಕತ್ತು ಮತ್ತು ಹಣೆಯ ಭಾಗದಲ್ಲಿ ಗಾಯ ಇರುವ ಬಗ್ಗೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ, ಇದೊಂದು ಕೊಲೆ ಕೃತ್ಯ ಆಗಿದ್ದು, ಅದರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಉಪ್ಪಿನಂಗಡಿ ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ತಿಳಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ  ಜಿಲ್ಲಾ ಅಪರಾಧ ಪತ್ತೆದಳ ಮತ್ತು ಉಪ್ಪಿನಂಗಡಿ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ಆರೋಪಿಗಳ ಪತ್ತೆಗೆ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ

30 ನೇ ತಾರೀಕಿಗೆ ಕೇರಳದಿಂದ ಬಂದಿದ್ದು:
ಮೃತದೇಹದಲ್ಲಿ ಆಧಾರ್ ಕಾರ್ಡ್‌ನ ಮಾಹಿತಿಯಂತೆ ಉಣ್ಣಿಕುಟ್ಟನ್ ಮನೆಯವರಿಗೆ ಮಾಹಿತಿ ನೀಡಲಾಗಿತ್ತು, ಅದರಂತೆ ಉಣ್ಣಿಕುಟ್ಟನ್ ತಾಯಿ, ಮಾವ ಸೇರಿದಂತೆ ಕುಟುಂಬ ಸದಸ್ಯರು ಬಂದು ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ, ಉಣ್ಣಿಕುಟ್ಟನ್ ಆ. 30 ರಂದು ಗುರುವಾರ ಬೆಳಿಗ್ಗೆ ಮನೆಯಿಂದ ಹೋಗಿದ್ದರು ಎಂದು ಹೇಳಲಾಗಿದೆ.
ಜಾಗ, ವಾಹನದ ಬ್ರೋಕರ್ ಆಗಿದ್ದರು:
ಉಣ್ಣಿಕುಟ್ಟನ್ ಜಾಗ ಮತ್ತು ವಾಹನ ಮಾರಾಟದ ಬ್ರೋಕರ್ ಆಗಿದ್ದರು. ಆಗಾಗೆ ಮನೆಯಿಂದ ಬಂದವರು ವಾರಗಟ್ಟಲೆ ಮನೆಗೆ ಹೋಗುತ್ತಿರಲಿಲ್ಲ. ಮನೆಯ ವರಿಗೂ ಇವರು ಎಲ್ಲಿ ಹೋಗುವುದೆಂದು ತಿಳಿಸುತ್ತಿರಲಿಲ್ಲವೆನ್ನಲಾಗಿದೆ. ಇದೀಗ ಪೊಲೀಸರು ತಿಳಿಸಿದ ಬಳಿಕವೇ ಮನೆಯವರಿಗೆ ಈತ ಇಲ್ಲಿಗೆ ಬಂದಿರುವುದು ತಿಳಿದಿರುವುದಾಗಿಯೂ ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.