ಸೆ.16 ರಂದು ಕೊಕ್ಕಡದಲ್ಲಿ ಸೇವಾಧಾಮ ಉದ್ಘಾಟನೆ.

ಧರ್ಮಸ್ಥಳ: ಸೇವಾ ಭಾರತಿ ಕನ್ಯಾಡಿ ಇದರ ಸಂಸ್ಥೆ ಬೆನ್ನುಮೂಳೆ ಮುರಿತಕ್ಕೊಳಗಾದವರಿಗಾಗಿ ಸಾಮಾಜಿಕ ಪುನಃಶ್ಚೇತನ ಕೇಂದ್ರ ಸೇವಾಧಾಮ ಸೆ.16 ರಂದು ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಸಭಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೇವಾ ಭಾರತಿ ಕನ್ಯಾಡಿ ಇದರ ಕಾರ್ಯದರ್ಶಿ ಕೆ. ವಿನಾಯಕ ರಾವ್ ಸೆ.6 ರಂದು ಕಛೇರಿಯಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸೇವಾಭಾರತಿ ಕಳೆದ 14 ವರ್ಷಗಳಿಂದ ವಿವಿಧ ಸಮಾಜ ಸೇವೆ ನಡೆಸುತ್ತಾ, ಕಳೆದ 2 ವರ್ಷಗಳಿಂದ ಹೊಸ ಯೋಜನೆ ಆಯೋಜಿಸುತ್ತಾ ಬರುತ್ತಿದ್ದು , ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಸಾಮಾಜಿಕ ಪುನಶ್ಚೇತನ ಕೇಂದ್ರ ಮಾನಸಿಕವಾಗಿ ಅವರನ್ನು ಸಬಲರನ್ನಾಗಿಸುವುದು. ಶಾರೀರಿಕ ಧೃಢರನ್ನಾಗಿಸುವುದು ಸ್ವಾವಲಂಬಿ ಜೀವನಕ್ಕೆ ತರಬೇತಿ ದಿನ ನಿತ್ಯದ ಚಟುವಟಿಕೆಗಳನ್ನು ಸ್ವಾ ಸಾಮರ್ಥ್ಯ ವೃದ್ಧಿಸುವುದು , ಆರೋಗ್ಯ ಮಾಹಿತಿ, ಧ್ಯಾನ, ಸಾಧನ ಸಲಕರಣೆಗಳ ಸೌಲಭ್ಯ ಜೀವನ ಕೌಶಲ್ಯ ತರಬೇತಿ ಪೌಷ್ಠಿಕಾಂಶಯುಕ್ತ ಆಹಾರ ಇನನಿತರ ಆಪ್ತ ಸಮಾಲೋಚನೆ ನಡೆಯಲಿದೆ.
ಬೆಂಗಳೂರಿನ ಎಪಿಡಿ ಲಿಂಗರಾಜುಪುರಂ ಸಹಯೋಗದೊಂದಿಗೆ ಅಂದಾಜು ರೂ.30 ಲಕ್ಷ ರೂಪಾಯಿ ಯೋಜನೆಗೆ ಪ್ರತೀ ವರ್ಷ ರೂ 10 ಲಕ್ಷ ವ್ಯಯವಾಗಲಿದೆ. ಸಂಘ ಸಂಸ್ಥೆಗಳಿಂದ ಧನಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.
ಸೇವಾಧಾಮದ ಉದ್ಘಾಟನೆಯನ್ನು ದಂತ ವೈದ್ಯರು 2014 ರ ಮಿಸ್ ವೀಲ್ ಚೆಯರ್ ಇಂಡಿಯಾ ಪುರಸ್ಕೃತರಾದ ಡಾ| ರಾಜಲಕ್ಷ್ಮೀ ಎಸ್ ಜೆ ಉದ್ಘಾಟಿಸಲಿದ್ದಾರೆ. ಕಾರ್ಯಾಲಯವನ್ನು ಶಾಸಕ ಹರೀಶ್ ಪೂಂಜ, ವಸತಿ ವಿಭಾಗವನ್ನು ಸಂಸದ ನಳಿನ್ ಕುಮಾರ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಫಿಸಿಯೋಥೆರಫಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶ್ರೀಮತಿ ಕ್ರಿಷ್ಟಿ ಅಬ್ರಹಾಂ ಎಪಿಡಿ ಬೆಂಗಳೂರು ಇದರ ಪಾಲುದಾರರು, ಕೆ ಕೃಷ್ಣ ಭಟ್ ಅಧ್ಯಕ್ಷರು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್, ಸುಬ್ರಹ್ಮಣ್ಯ ಶಬರಾಯ ಅಧ್ಯಕ್ಷರು ವ್ಯವಸ್ಥಾಪನಾ ಮಂಡಳಿ ಸೌತಡ್ಕ, ಬಸವರಾಜ ವಿ.ಎ ಆಯುಕ್ತರು ವಿಕಲಚೇತನರ ಹಕ್ಕುಗಳ ನಿಯಮ ಇವರುಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಉಪಾಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಕೇಂದ್ರದ ವ್ಯವಸ್ಥಾಪಕ ಬಾಲಕೃಷ್ಣ  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.