ಬೆಳ್ತಂಗಡಿ ಮಂಜುಶ್ರೀ ಜೇಸಿಐನಿಂದ ತಾಲೂಕು ಮಟ್ಟದ ವಾಲಿಬಾಲ್

ಬೆಳ್ತಂಗಡಿ : ಕ್ರೀಡಾಸ್ಪೂರ್ತಿ ಕ್ರೀಡಾಳುವಿನ ಮನೋಭಾವ ವಾಗಿರಬೇಕು. ಅಂತಹ ಮನೋಭಾವವನ್ನು ಬೆಳೆಸಿಕೊಂಡು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಕ್ರೀಡಾಳು ಸಮಾಜದಲ್ಲಿ ಶ್ರೇಷ್ಠ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೋಹನ ಗೌಡ ಹೇಳಿದರು.
ಅವರು ಸೆ.2 ರಂದು ಬೆಳ್ತಂಗಡಿ ಮಂಜುಶ್ರೀ ಜೇಸಿಐ ವತಿಯಿಂದ ವಾಣಿ ಶಿಕ್ಷಣ ಸಂಸ್ಥೆಗಳ ಅಂಗಣದಲ್ಲಿ ಜೇಸಿ ಸಪ್ತಾಹ ನಿನಾದ-2018 ರ ಅಂಗವಾಗಿ ನಡೆದ ತಾಲೂಕು ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಜೇಸಿಐ ಸಮಾಜ ಸೇವೆಯೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಲಾಭದ ಉದ್ದೇಶವಿಲ್ಲದೆ ತಳಮಟ್ಟದ ಜನರ ಬದುಕನ್ನು ಉದ್ಧಾರ ಮಾಡುವಲ್ಲಿ ಜೇಸಿಐ ಹಮ್ಮಿಕೊಳ್ಳುತ್ತಿರುವ ಅನೇಕ ಸಮಾಜಮುಖಿ ಕಾರ್ಯಗಳು ಸಂಘ ಸಂಸ್ಥೆಗಳಿಗೆ ಮಾದರಿ ಎಂದರು.
ಮುಖ್ಯ ಅತಿಥಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ ಯದುಪತಿ ಗೌಡ ಮಾತನಾಡಿ, ಜೇಸಿ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಗ್ರಾಮೀಣ ಮಟ್ಟಕ್ಕೆ ವಿಸ್ತರಿಸಬೇಕು. ಅಲ್ಲಿನ ಯುವಕ ಮತ್ತು ಯುವತಿ ಮಂಡಲಗಳ ಜೊತೆ ಸೇರಿಕೊಂಡು ಕಾರ್ಯ ನಿರ್ವಹಿಸಿದಾಗ ಹಳ್ಳಿಗಳಲ್ಲೂ ಗುಣ ಮಟ್ಟದ ಕಾರ್ಯಕ್ರಮಗಳು ಮೂಡಿ ಬರುವಂತಾಗುವುದು ಎಂದರು. ಅಧ್ಯಕ್ಷತೆಯನ್ನು ಜೇಸಿಐ ಘಟಕಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ವಹಿಸಿ ಸ್ವಾಗತಿಸಿದರು.
ವೇದಿಕೆಯಲ್ಲಿ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಉದ್ಯಮಿ ಗಣೇಶ್ ಮಲ್ಯ , ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಜೇಸಿಐ ಪೂರ್ವಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ನಿಕಟಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ, ಜೇಸಿ ಸಪ್ತಾಹ ಸಂಯೋಜಕ ಸ್ವರೂಪ್ ಶೇಖರ್, ಕ್ರೀಡಾ ಸಂಯೋಜಕ ಶಂಕರ್ ರಾವ್, ಜೇಜೆಸಿ ಘಟಕದ ಅಧ್ಯಕ್ಷ ಸುಹಾಸ್ ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷ ಶ್ರೀನಾಥ್ ಕೆ.ಎಂ. ವೇದಿಕೆಗೆ ಅತಿಥಿಗಳನ್ನು ಆಹ್ವಾನಿಸಿದರು. ಉಪಾಧ್ಯಕ್ಷ ರಂಜಿತ್ ಹೆಚ್.ಡಿ ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ವಿಶಾಲ್ ಅಗಸ್ಟಿನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.