ಅಳದಂಗಡಿ – ವೇಣೂರು ಸಂಪರ್ಕ ಕಡಿದುಕೊಳ್ಳುವ ಭೀತಿ: ಕುಸಿಯುವ ಹಂತದಲ್ಲಿ ನಡಾಯಿ ಸೇತುವೆ

ಅಳದಂಗಡಿ: ಅಳದಂಗಡಿ – ವೇಣೂರು ರಸ್ತೆ ನಡಾಯಿ ಎಂಬಲ್ಲಿ ಸೇತುವೆ ಕುಸಿಯುವ ಬೀತಿಯಲ್ಲಿದೆ. ಕಳೆದ ಒಂದು ವರ್ಷದ ಹಿಂದೆಯೇ ಈ ಸೇತುವೆ ಮಧ್ಯದಲ್ಲಿ ರಂದ್ರ ಬಿದ್ದಿರುವುದು ಗಮನಕ್ಕೆ ಬಂದಿದ್ದು ಸಂಬಂದಪಟ್ಟ ಇಲಾಖೆಗೆ ತಿಳಿಸಿದರೂ ಇದುವರೆಗೂ ಈ ಬಗ್ಗೆ ಗಮನ ಹರಿಸಿಲ್ಲ.
ಅಳದಂಗಡಿಯಿಂದ ಕುಕ್ಕೇಡಿಯಾಗಿ ವೇಣೂರು ಹಾಗೂ ವೇಣೂರಿನಿಂದ ಅಳದಂಗಡಿಗೆ ಗ್ರಾಮ ಸಡಕ್ ರಸ್ತೆಯಾಗಿರುವುದರಿಂದ ದಿನಕ್ಕೆ ಸಾವಿರಾರು ವಾಹನಗಳು, ಶಾಲಾ ಬಸ್, ಖಾಸಗಿ ಬಸ್, ಲಾರಿ, ಅಟೋ, ಜೀಪ್‌ಗಳು ಸಂಚರಿಸಲು ಈ ರಸ್ತೆಯನ್ನೇ ಬಳಸಲಾಗುತ್ತದೆ. ಅಳದಂಗಡಿಗೆ ಸಮೀಪ ನಡಾಯಿ ಎಂಬಲ್ಲಿರುವ ಈ ಸೇತುವೆಗೆ ಮುಕ್ತಿ ಯಾವಾಗ ಎಂದು ಗ್ರಾಮಸ್ಥರು ಹಾಗೂ ಚಾಲಕರು ಪರದಾಡುವ ಸ್ಥಿತಿ ಎದುರಾಗಿದೆ. ಸೇತುವೆಯ ಬುಡದಲ್ಲಿರುವ 4 ಕಡೆ ತಡೆಗೋಡೆ ಪೂರ್ಣ ಕುಸಿದಿದೆ. ಸೇತುವೆ ಮೇಲೆಯೇ ದೊಡ್ಡ ಗಾತ್ರದ ರಂದ್ರ ಉಂಟಾಗಿದೆ. ಇತ್ತ ಜನಪ್ರತಿನಿಧಿಗಳು ಹಾಗೂ ಇಲಾಖೆಯವರು ಗಮನ ಹರಿಸಿ ಸಮಸ್ಯೆಗಳು ತಲೆದೋರುವ ಮೊದಲು ಎಚ್ಚೆತ್ತುಕೊಳ್ಳುವುದು ಉತ್ತಮ. ಜನಪ್ರತಿನಿಧಿಗಳು ಮತ್ತು ಇಲಾಖಾಧಿಕಾರಿಗಳು ಯಾವುದೇ ಸಮಸ್ಯೆಗಳ ಬಗ್ಗೆ ಗಮನ ಹರಿಸಿದರೂ ಯಾಕೆ ನಿರ್ಲಕ್ಷ್ಯ ತೋರುವುದಾಗಿ ಗ್ರಾಮಸ್ಥರು ಹೇಳಿಕೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.