ಶಾಲಾ ಮಧ್ಯಂತರ ರಜೆ ಕಡಿತ: ಅ. 14ರಿಂದ 21 ವರೆಗೆ ಮಾತ್ರ ರಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಸಿಗುತ್ತಿದ್ದ ಮಧ್ಯಂತರ ಬೇಸಿಗೆ ದಸರಾ ರಜೆಯನ್ನು ಕಡಿತಗೊಳಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಪತ್ರ ಬಿಡುಗಡೆಗೊಳಿಸಿದೆ.
ಆ ಹಿನ್ನೆಲೆಯಲ್ಲಿ ಎಂದಿನಂತೆ ಅಕ್ಟೋಬರ್ 7 ರಿಂದ ಪ್ರಾರಂಭಗೊಂಡು 21 ರ ವರೆಗೆ ಇದ್ದ ರಜೆ ಕಡಿತಗೊಳಿಸಿ ಅ.14 ರಿಂದ 21 ರ ವರೆಗೆ ಮಾತ್ರ ರಜೆ ನೀಡುವ ತಯಾರಿ ನಡೆಸಿದೆ. ಭಾರೀ ಮಳೆ ಮತ್ತು ಪ್ರಾಕೃತಿಕ ವಿಕೋಪ ಕಾರಣದಿಂದ ಈ ಬಾರಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ರಜೆಗಳು ಆಗಿರುವ ಹಿನ್ನೆಲೆಯಲ್ಲಿ ಆ ಸಮಯದ ಪಾಠ ಪ್ರವಚನಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಅಲ್ಲದೆ ಕೆಲ ಸಂಸ್ಥೆಗಳಲ್ಲಿ ಶನಿವಾರ ಸಂಜೆಯವರೆಗೂ ತರಗತಿ ನಡೆಸಲು ವ್ಯವಸ್ಥೆ ರೂಪಿಸಿಕೊಳ್ಳುವಂತೆ ಸೂಚ್ಯವಾಗಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.