ಸೆ. 8-9: ವಾಣಿ ಸಂಸ್ಥೆಯಲ್ಲಿ ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನದ ಬೆಳ್ಳಿಹಬ್ಬ

ಬೆಳ್ತಂಗಡಿ: ಉಡುಪಿ ಕಾಸರಗೋಡು ದ. ಕ ಜಿಲ್ಲೆಯ ವ್ಯಾಪ್ತಿಯ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಇದರ 25 ನೇ ವರ್ಷದ ಮಕ್ಕಳ ಧ್ವನಿ -2018 ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನವು ಸೆ. 8 ಮತ್ತು 9 ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಡಿ ಯದುಪತಿ ಗೌಡ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಕ್ಕಳಿಗಾಗಿ ಮಕ್ಕಲೇ ನಡೆಸುವ ಕಾರ್ಯಕ್ರಮ. ಕವಿ, ಕಥಾ, ಅಭಿನಯಗೀತೆ ಗೋಷ್ಟಿಗಳು, ಪ್ರತಿಭಾ ಪ್ರದರ್ಶನ, ಸಾಹಿತ್ಯಿಕ ಸ್ಪರ್ಧೆ ಇತ್ಯಾಧಿ ಚಟುವಟಿಕೆಗಳು ನಡೆಯಲಿದೆ. ಕವಿಗೋಷ್ಟಿಯಲ್ಲಿ 29 ಮಕ್ಕಳು ಕವಿಗಳು, ಕಥಾ ಗೋಷ್ಟಿಯಲ್ಲಿ 30 ಮಕ್ಕಳು ಕತೆಗಾರರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ ಆಯ್ಕೆ ಪ್ರಕ್ರೀಯೆಯಲ್ಲಿ ಅರ್ಹತಾ ಹಂತ, ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅವಕಾಶ ಗಿಟ್ಟಿಸಿಕೊಂಡಂತೆ ಪ್ರಜ್ಞಾ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಅರ್ಹತೆಯಂತೆ ಇನ್ನಿಬ್ಬರು ಅನನ್ಯಾ ಕವಿಗೋಷ್ಟಿ ಅಧ್ಯಕ್ಷತೆ ಮತ್ತು ಪೂರ್ಣಿಮಾ ಆರ್ ಜೈನ್ ಕಥಾಗೋಷ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. 2 ದಿನಗಳಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪ. ಪೂ ವಿಭಾಗಗಳ 2 ಸಾವಿರದಷ್ಟು ಮಕ್ಕಳು ಇದರಲ್ಲಿ ಭಾಗಿಯಾಗಲಿದ್ದಾರೆ. ಆಯ್ದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಕೂಡ ನಡೆಯಲಿದೆ ಎಂದರು.
ಗೋಷ್ಟಿಯಲ್ಲಿ ಜಿ ಸೋಮೇಗೌಡ, ಸತೀಶ್ ರೈ ಬಾರ್‍ದಡ್ಕ, ಲಕ್ಷ್ಮೀನಾರಾಯಣ ಕೆ, ರಮೇಶ್ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.