HomePage_Banner_
HomePage_Banner_
HomePage_Banner_

ಯಕ್ಷಗಾನ ಕಲೆ ಸಹಿತ ಬಹುಮುಖ ವ್ಯಕ್ತಿತ್ವದ ಧರ್ಮಸ್ಥಳ ಡಿ ಹೌಡಪ್ಪ ನಿಧನ

ಧರ್ಮಸ್ಥಳ: ಶ್ರೀ ಸತ್ಯ ಪದ್ನಾಜಿ ಸಾರ ಮುಪ್ಪಣ್ಯ ಯಕ್ಷಗಾನ ಮಂಡಳಿ ಅಶೋಕ ನಗರ ಮೇಳದ ನಿರ್ಮಾಪಕರಾಗಿ, ಯಕ್ಷಗಾನ ಭಾಗವತರಾಗಿ ಚೆಂಡೆ-ಮದ್ದಳೆ ವಾದಕರಾಗಿ ವೇಷಧಾರಿಯೂ ಆಗಿದ್ದ ಧರ್ಮಸ್ಥಳ ಅಶೋಕ ನಗರ ನಿವಾಸಿ ಅಪರೂಪದ ಕಲಾವಿದ ಹಾಗೂ ಬಹುಮುಖ ವ್ಯಕ್ತಿತ್ವದ ವ್ಯಕ್ತಿ ಧರ್ಮಸ್ಥಳ ಹೌಡಪ್ಪ (72ವ.) ಇತ್ತಿಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಧರ್ಮಸ್ಥಳದಲ್ಲಿ ಶಿವ-ಶಂಕರ ಆನೆಗಳಿದ್ದ ಸಂದರ್ಭ ಮಾವುತರಾಗಿದ್ದ ಪೊಂರ್ಕ ಅವರ ಮಗನಾದ ಡಿ ಹೌಡಪ್ಪ ಅವರು ಆನೆ ಪಳಗಿಸುವ ಕೆಲಸ ಮಾಡುತ್ತಿದ್ದರು. ದಿ. ನಾರಾಯಣ ಮಾವುತರ ಜೊತೆಗೂ ಆನೆಯನ್ನು ನಿರ್ವಹಿಸಿದ್ದರು. ಬಳಿಕ ತಂದೆ ನಿರ್ವಹಿಸುತ್ತಿದ್ದ ಮರದ ಕೆತ್ತನೆ, ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಚೆಂಡೆ, ಮೃದಂಗ, ತಾಸೆ, ಡೋಲು, ಲಗ್ಗೆ, ತಮಟೆ, ದುಡಿ ಹೀಗೆ ಅನೇಕ ತರಹದ ಚರ್ಮವಾದ್ಯಗಳನ್ನು ಸ್ವತಹ ತಯಾರಿಸುತ್ತಿದ್ದರು. ತುಳುಚಿತ್ರರಂಗದ ರಂಗಭೂಮಿ ಕಲಾದವ ಮುಂಬೈ ಸದಾಶಿವ ಸಾಲ್ಯಾನ್ ಅವರಿಗೂ ಇವರು ಕೇಳಿಕೆ ಮೇರೆಗೆ “ದುಡಿ” ರಚಿಸಿಕೊಟ್ಟಿದ್ದರು. ಧರ್ಮಸ್ಥಳ ದೇವಳದ ಗಂಟೆ ಬಾರಿಸುವ ದೊಡ್ಡ ಗಾತ್ರದ ನಗಾರಿಯನ್ನು ಇವರೇ ದುರಸ್ತಿ ಮಾಡುತ್ತಿದ್ದರು. ಉತ್ತಮ ದೇಹದಾರ್ಢ್ಯತೆ ಹೊಂದಿದ್ದ ಅವರು ಇಳಿವಯಸ್ಸಿನಲ್ಲೂ ಅತೀ ಭಾರ ಹೊರುತ್ತಾ ಎಲ್ಲರ ಹೌಹಾರಿಸುತ್ತಿದ್ದರು.
ರಾಮಾಯಣ, ಮಹಾಭಾರತ, ಭಗವದ್ಗೀತೆ ಪೌರಾಣಿಕ ಕಥೆಗಳನ್ನು ತಮ್ಮ ಜ್ಞಾನ ಭಂಡಾರದಲ್ಲಿ ತುಂಬಿಕೊಂಡು, ಯಾವುದೇ ಪ್ರಶ್ನೆಗಳಿಗೆ ಥಟ್ಟನೆ ಉತ್ತರ ನೀಡುತ್ತಿದ್ದರು. ಗಣಪತಿ ಆರಾಧಕರಾಗಿದ್ದು ಸಂಸ್ಕೃತ ಶ್ಲೋಕಗಳನ್ನು ಬಲ್ಲವರಾಗಿದ್ದರು. ಅಪೂರ್ವ ಸಾಹಿತ್ಯಾಸಕ್ತರೂ ಆಗಿದ್ದ ಅವರು ತುಳು ಗೀತೆ, ಭಜನೆ, ಮಂಗಳ ಗೀತೆಗಳನ್ನು ಬರೆದಿದ್ದರು. ನವರಾತ್ರಿಯಲ್ಲಿ ಹುಲಿವೇಶ ಕುಣಿತದ ತಂಡವನ್ನು ನಿರ್ವಹಿಸುತ್ತಿದ್ದರು. ಇವರ ಬಹುಮುಖ ಸೇವೆಗೆ ಆಡಿದ್ರಾವಿಡ ಸಮಾಜ ಸೇವಾ ಸಂಘ ಮಂಗಳೂರು ಸಹಿತ ಅನೇಕ ಕಡೆ ಸನ್ಮಾನ-ಪುರಸ್ಕಾರಗಳು ಲಭಿಸಿತ್ತು. ಈ ಎಲ್ಲಾ ಸಾಧನೆಗಳನ್ನು ಅವರು ಗುರುವಿಲ್ಲದೆ ತನ್ನ ಸ್ವಂತ ವಿವೇಚನೆಯಿಂದ ಮಾಡುತ್ತಿದ್ದರು ಎಂಬುದು ವಿಶೇಷವಾಗಿತ್ತು.
ಮೃತರು ಪತ್ನಿ, ಮಕ್ಕಳು, ಸಹಸೋದರ ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.