ಬೆಳಾಲು ಪ್ರಾ.ಕೃ.ಪ.ಸ.ಸಂಘಕ್ಕೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

ಬೆಳಾಲು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ 2017-18 ನೇ ಸಾಲಿನ ಮಹಾಸಭೆಯು ಸೆ.1 ರಂದು ಜರುಗಿದ್ದು, ಸಂಘದ ವ್ಯವಹಾರದಲ್ಲಿ ಉತ್ತಮ ಸಾಧನೆಗೈದ ಬೆಳಾಲು ಪ್ರಾ.ಕೃ.ಪ.ಸಹಕಾರಿ ಸಂಘಕ್ಕೆ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ದ.ಕ.ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ನಿರ್ದೇಶಕರಾದ ನಿರಂಜನ್ ಬಾವಂತಬೆಟ್ಟು ರವರು ಸಂಘದ ಅಧ್ಯಕ್ಷ ಹೆಚ್.ಪದ್ಮಗೌಡ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರುಕ್ಮಯ್ಯ ಗೌಡ ರವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಸುಲೈಮಾನ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧಿಕಾರಿ ವರ್ಗದವರು, ಅತಿಥಿ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.