ಡಾ| ಟಿ.ಎನ್. ತುಳುಪುಳೆಯವರಿಂದ ಗುರುದೇವ ಕಾಲೇಜಿಗೆ ಪುಸ್ತಕಗಳ ಕೊಡುಗೆ

ಬೆಳ್ತಂಗಡಿ : ಬೆಳ್ತಂಗಡಿಯ ಖ್ಯಾತ ವೈದ್ಯ, ಹಿರಿಯ ಸಾಹಿತಿ ಡಾ| ಟಿ ಎನ್ ತುಳುಪುಳೆ ರವರು ತಾವು ಸಂಗ್ರಹಿಸಿರುವ ಪುಸ್ತಕಗಳಲ್ಲಿ ಸುಮಾರು ರೂ.15 ಸಾವಿರಕ್ಕಿಂತ ಹೆಚ್ಚು ಬೆಲೆ ಬಾಳುವ 97 ಪುಸ್ತಕಗಳನ್ನು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿಗೆ ಕೊಡುಗೆಯಾಗಿ ನೀಡಿದ್ದಾರೆ.
ತನ್ನ ಮನೆಯನ್ನೇ ಗ್ರಂಥಾಲಯವಾಗಿ ಮಾಡಿಕೊಂಡಿರುವ ತುಳುಪುಳೆಯವರು ತಾನೇ ಬರೆದ ಹಲವಾರು ಕೃತಿಗಳು ಸೇರಿದಂತೆ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡ ಬೆಳ್ತಂಗಡಿಯ ಹಿರಿಯ ವೈದ್ಯರಾಗಿದ್ದಾರೆ. ಶ್ರೀ ಗುರುದೇವ ವಿದ್ಯಾ ಸಂಸ್ಥೆಯ ಮೇಲೆ ಅಭಿಮಾನ ಮತ್ತು ತನ್ನ ನಂತರದ ದಿನಗಳಲ್ಲಿ ಪುಸ್ತಕಗಳು ವ್ಯರ್ಥವಾಗದೆ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂಬ ಉದ್ಧೇಶದಿಂದ ಈ ಕೊಡುಗೆಯನ್ನು ನೀಡಿದ್ದಾರೆ. ಇವರ ಈ ಉದಾರ ಮನಸ್ಸಿಗೆ ಸಂಸ್ಥೆಯ ಅಧ್ಯಕ್ಷ ಕೆ ವಸಂತ ಬಂಗೇರ, ಆಡಳಿತ ಮಂಡಳಿ ಸದಸ್ಯರು , ಪ್ರಾಚಾರ್ಯ ಎ ಕೃಷ್ಣಪ್ಪ ಪೂಜಾರಿ ಮತ್ತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.