ಗೋಪಾಲ ಪೂಜಾರಿ(ಮೋಂಟಣ್ಣ) ಮುಂಡಾಜೆ ನಿಧನ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಇಲ್ಲಿನ ಕೂಳೂರು ನಿವಾಸಿ, ಕೃಷಿ ಕೂಲಿ ಕಾರ್ಮಿಕರಾಗಿದ್ದ ಗೋಪಾಲ ಪೂಜಾರಿ (ಮೋಂಟಣ್ಣ) (60.ವ)ರವರು ಹೃದಯಾಘಾತಕ್ಕೊಳಗಾಗಿ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಜ್ವರದಿಂದ ಅಸೌಖ್ಯಕ್ಕೊಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅಂದು ಮನೆಯಲ್ಲಿ ಕುಸಿದುಬಿದ್ದು ನಿಧನರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಂಡು ಗೌರವಿಸುತ್ತಿದ್ದರು. ಮೃತರು ಪತ್ನಿ ಸುಂದರಿ, ಮುಂಡಾಜೆ ಗ್ರಾ.ಪಂ ನಲ್ಲಿ ಗ್ರಂಥಾಲಯ ಪಾಲಕರಾಗಿರುವ ಮಮತಾ, ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಪುತ್ರ ಸುರೇಶ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಪಂಚಾಯತ್ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಊರಿನ ಎಲ್ಲ ಧರ್ಮದ ವ್ಯಕ್ತಿಗಳು ಭೇಟಿ ನೀಡಿ ಅಂತಿಮದರ್ಶನ ಪಡೆದು ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.