ಮಾಚಾರ್‌ನಲ್ಲಿ 26 ನೇ ವರ್ಷದ ಮೊಸರುಕುಡಿಕೆ ಉತ್ಸವ

Advt_NewsUnder_1
Advt_NewsUnder_1
Advt_NewsUnder_1

ಮಾಚಾರು: ‘ಸದೃಢ ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಎಲ್ಲಾ ಧರ್ಮದ ಜನರು ಒಗ್ಗೂಡಿ ಬಾಳುವುದು ಮುಖ್ಯ. ಸಾಮರಸ್ಯ ಮತ್ತು ಸಹೋದರತೆಯೇ ಎಲ್ಲಾ ಧರ್ಮಗಳ ಸಾರ. ಈ ನಿಟ್ಟಿನಲ್ಲಿ ಪ್ರಗತಿ ಯುವಕ ಮಂಡಲ ಎಲ್ಲಾ ಧರ್ಮೀಯರನ್ನು ಒಗ್ಗೂಡಿಸಿ ಈ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದೆ’ ಎಂದು, ಉಜಿರೆ ಶ್ರೀ ಧ.ಮ.ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಅಭಿಪ್ರಾಯ ಪಟ್ಟರು.
ಅವರು ಸೆ.2 ರಂದು ಮಾಚಾರಿನಲ್ಲಿ ಪ್ರಗತಿ ಯುವಕ ಮಂಡಲ, ಯುವತಿ ಮಂಡಲ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬದನಾಜೆ ವತಿಯಿಂದ ನಡೆದ 26 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ. ಎ ಹಂಝ ಬದ್ರಿಯಾ ಬಂಡಸಾಲೆ, ‘ಸುದ್ದಿ ಬಿಡುಗಡೆ ಬೆಳ್ತಂಗಡಿ’ಯ ಹೆರಾಲ್ಡ್ ಪಿಂಟೋ ಪಾಲ್ಗೊಂಡು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಶ್ರೀ ಧ. ಮಂ. ವಸತಿ ಕಾಲೇಜು ಉಜಿರೆಯ ಉಪ ಪ್ರಾಂಶುಪಾಲ ಮನೀಷ್ ಕುಮಾರ್‌ವಹಿಸಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೊಡಗು ಹಾಗೂ ಕೇರಳದ ಪ್ರವಾಹದಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳಗ್ಗಿನಿಂದ ನಡೆದ ವಿವಿಧ ಆಟೋಟ ಸ್ಪರ್ಧೆ ಗಳ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಸುಂದರ ಬಂಗೇರ, ಸ್ಥಾಪಕ ಅಧ್ಯಕ್ಷ ರಾಮಯ್ಯ ಗೌಡ, ಯುವತಿ ಮಂಡಲ ಅಧ್ಯಕ್ಷೆ ಗೀತಾ ಜಿ. ಉಪಾಧ್ಯಾಯ, ಭಜನಾ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಉಪಾಧ್ಯಾಯ ಹಾಗೂ ಉದ್ಘಾಟಕ ಪ್ರಕಾಶ್ ಬಾರಿತ್ತಾಯ ಕಲ್ಲಾಜೆ, ಕಟ್ಟಡ ಸಮಿತಿ ಅಧ್ಯಕ್ಷ ದಿಲೀಪ್ ನಾಯರ್ ಉಪಸ್ಥಿತರಿದ್ದರು.
ಶಿಕ್ಷಕ ಸುರೇಶ್ ಮಾಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ಸದಸ್ಯ ಇಕ್ಬಾಲ್ ಮಾಚಾರ್ ಸ್ವಾಗತಿಸಿ, ಶ್ರೀನಿಧಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.