ಪೃಥ್ವಿ ಜ್ಯುವೆಲ್ಲರ್‍ಸ್‌ನಲ್ಲಿ “ಕೃಷ್ಣ ವೇಶ” ಮತ್ತು “ಚಿತ್ರಕಲಾ ಸ್ಪರ್ಧೆ”

ಬೆಳ್ತಂಗಡಿ: ಇಲ್ಲಿನ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿರುವ ಪಾರಸ್ ಪೃಥ್ವಿ ಜ್ಯುವೆಲ್ಲರ್‍ಸ್‌ನಲ್ಲಿ ಸೆ.2 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಮುದ್ದು ಕೃಷ್ಣ ವೇಶ ಸ್ಪರ್ಧೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಶ್ರೀ ಕೃಷ್ಣ ದೇವರ ಚಿತ್ರ ಬಿಡಿಸುವ ಸ್ಪರ್ಧೆಯು ನಡೆಯಿತು.
ಬೆಳ್ತಂಗಡಿ ನಗರ ಮತ್ತು ಆಸುಪಾಸಿನ ಗ್ರಾಮಗಳ 17 ಅಂಗನವಾಡಿ ಕೇಂದ್ರಗಳಿಂದ ಕೃಷ್ಣ ವೇಶಧಾರಿ ಪುಟಾಣಿಗಳು ಭಾಗಿಯಾಗಿ ವೇದಿಕೆಯಲ್ಲಿ ತಮ್ಮ ಬಾಲಲೀಲೆ ಪ್ರದರ್ಶಿಸಿದರು. ಬಳಿಕ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜೊತೆಗೆ ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಶ್ರೀಕೃಷ್ಣ ದೇವರ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಸುಮಾರು 90 ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಇದರಲ್ಲಿ 1 ರಿಂದ 4 ಮತ್ತು 5 ರಿಂದ 2 ನೇ ತರಗತಿ 2 ವಿಭಾಗಗಳಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಶೋರೂಮ್‌ನಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಅಳದಂಗಡಿ ಆಮಂತ್ರಣ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಅರ್ವ, ಓಡಿಲ್ನಾಳ ಸರಕಾರಿ ಶಾಲಾ ಮುಖ್ಯ ಶಿಕ್ಷಕ ದತ್ತಾತ್ರೇಯ ಗೊಲ್ಲ, ಸುದ್ದಿ ಪತ್ರಿಕೆ ವರದಿಗಾರ ಅಚ್ಚು ಮುಂಡಾಜೆ, ಮಳಿಗೆಯ ವ್ಯವಸ್ಥಾಪಕ ಸಂದೀಪ್, ಅಸೆಸ್ಟೆಂಟ್ ಸೇಲ್ಸ್ ಮೆನೇಜರ್ ಭಾನು ಪ್ರಕಾಶ್ ಶೆಟ್ಟಿ ಇವರು ಭಾಗಿಯಾಗಿದ್ದರು.
ಸಭೆಯಲ್ಲಿ ಭಾಗಿಯಾಗಿದ್ದ ಗ್ರಾಹಕರಿಗಾಗಿ ರಸಪ್ರಶ್ನೆ ಮತ್ತು ಸ್ಥಳದಲ್ಲೇ ಬಹುಮಾನ ವಿತರಣೆ ನಡೆಯಿತು. ಮಾರ್ಕೆಟಿಂಗ್ ಫೀಲ್ಡ್ ಟೀಮ್ ಲೀಡರ್ ನಿಸಾರ್ ಗುರುವಾಯನಕೆರೆ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ಉಮಾನಾಥ ಪ್ರಭು, ಎಕ್ಸ್‌ಕ್ಯೂಟಿವ್‌ಗಳಾದ ಹರಿಪ್ರಸಾದ್ ಪ್ರಭು, ವಿನಯ್, ದಿನೇಶ್, ಗುರುಪ್ರಸಾದ್, ಪ್ರಸಾದ್, ಶಿಲ್ಪಾ, ಪುನೀತಾ ಮತ್ತು ಅನ್ವಿತಾ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.