ಕಳಿಯ: ನೀರಿನಲ್ಲಿ ಮುಳುಗಿ ಯುವಕ ದಾರುಣ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ: ಇಲ್ಲಿಯ ಗೇರುಕಟ್ಟೆ ಸಮೀಪದ ಎರುಕಡಪು ನದಿಗೆ ಸ್ನಾನಕ್ಕೆಂದು ಇಳಿದ ಕಳಿಯ ಗ್ರಾಮದ ಹರಿಪ್ರಸಾದ್‌ರವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ.2 ರಂದು ನಡೆದಿದೆ.
ಹರಿಪ್ರಸಾದ್‌ರವರು ಪಣೆಮಜಲಿನಲ್ಲಿ ವೆಲ್ಡಿಂಗ್ ಕೆಲಸವನ್ನು ಮಾಡುತ್ತಿದ್ದು, ಸೆ.2 ರಂದು ರಜಾದಿನವಾದ ಕಾರಣ ನಾಲ್ವರು ಗೆಳಯರ ಜೊತೆ ಸೇರಿ ನದಿಗೆ ಈಜಲು ತೆರಳಿದ್ದರು. ಹರಿಪ್ರಸಾದ್‌ರವರು ನೀರಿಗೆ ಇಳಿದಿದ್ದು, ನೀರಿನ ಸೆಳೆತಕ್ಕೆ ಸಿಲುಕಿ, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದರು. ಅವರನ್ನು ರಕ್ಷಿಸಲು ಗೆಳೆಯರು ಎಷ್ಟೇ ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. ಇದರಿಂದ ಹೆದರಿದ ಅವರು ಸ್ಥಳೀಯರಿಗೂ ಮಾಹಿತಿ ನೀಡದೆ ನೇರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರ ತಿಳಿಸಿದರು.
ಹರಿಪ್ರಸಾದ್ ರವರ ತಂದೆ ಕೇಶವ ಪೂಜಾರಿ ಯವರು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಮಗಳು ಹಿರಿಯವಳಾಗಿದ್ದು, ಹರಿಪ್ರಸಾದ್ ರವರು ಕಿರಿಯವರು. ಎಸ್ಸೆಸ್ಸೆಲ್ಸಿ ಶಿಕ್ಷಣದ ಬಳಿಕ ಕಳೆದ ಕೆಲವು ತಿಂಗಳಿಂದ ವೆಲ್ಡಿಂಗ್ ಕೆಲಸಕ್ಕೆ ಹೋಗುತ್ತಿದ್ದರು.
ಅಗ್ನಶಾಮಕ ಸಿಬ್ಬಂದಿ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.