ನಿಡ್ಲೆ: ಶ್ರೀ ಕೃಷ್ಣ ಜನ್ಮಾಷ್ಟಮಿ

ನಿಡ್ಲೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಿಡ್ಲೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಿಡ್ಲೆ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಸೆ. 2 ರಂದು ಜರುಗಿತು.
ಉದ್ಘಾಟನೆಯನ್ನು ನಿವೃತ್ತ ಉಪತಹಶೀಲ್ದಾರರಾದ ನಿಡ್ಲೆ ಚೆನ್ನಪ್ಪ ಗೌಡರವರು ನೆರವೇರಿಸಿ ಮಾತನಾಡಿ, ಯುವಕರೆಲ್ಲಾ ಒಗ್ಗಟ್ಟಿನಿಂದ ನಡೆಸಿಕೊಂಡು ಬರುವ ಈ ಕಾರ್ಯಕ್ರಮವು ನಿರಂತರವಾಗಿ ನಡೆಯಲಿ. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಪಟುಗಳಿಗೆ ಗ್ರಾಮೀಣ ಮಟ್ಟದಲ್ಲಿ ಆಡಿದ ಕ್ರೀಡೆಗಳೇ ಬುನಾದಿಯಾಗಿರುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಡ್ಲೆ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್ ಮಾಡಂಕಲ್ಲು ಶುಭಕೋರಿದರು. ನಿಡ್ಲೆ ಶ್ರೀ ಮಹಾಗಣಪತಿ ಭಜನಾ ಮಂಡಳಿ ಗೌರವಾಧ್ಯಕ್ಷ ರಾಮಣ್ಣ ಗೌಡ ನೂಜಿಲ, ಶಶಿಧರ ಭಟ್ ನೂಜೋಡಿ, ಸಮಿತಿ ಅಧ್ಯಕ್ಷ ಪ್ರಕಾಶ ಟೈಲರ್ ನಿಡ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನೋದ ಶೇಡಿ ಪ್ರಾರ್ಥಿಸಿ, ಹರ್ಷ ಪೈರೋಡಿ ಸ್ವಾಗತಿಸಿ, ನಾರಾಯಣ ಗೌಡ ಮಾಪಲಾಜೆ ವಂದಿಸಿ, ಜಗದೀಶ್ ಶೆಟ್ಟಿ ಶೇಡಿ ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಮಣ್ಣ ಗೌಡ ನೂಜಿಲ, ಲೋಕಯ್ಯ ಗೌಡ ನೂಜಿಲ, ವಿಶ್ವನಾಥ ಗೌಡ ಆಲ್ತಿಮಾರುರವರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.