ಧರ್ಮಸಂಸದ್: ಉಜಿರೆಯಿಂದ ಸಾಗಿದ ಸಾಧು ಸಂತರ ಭವ್ಯ ಮೆರವಣಿಗೆ

 

ಧರ್ಮಸ್ಥಳ: ಇಲ್ಲಿಯ ನಿತ್ಯಾನಂದನಗರ ಶ್ರೀ ರಾಮಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಧರ್ಮಸಂಸದ್‌ಗೆ ಸಾಧು ಸಂತರ ಮೆರವಣಿಗೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ ರವರು ಸೆ.2 ರಂದು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಉಜಿರೆ ಜನಾರ್ದನ ಸ್ವಾಮಿ ದೇವಳದ ವಠಾರದಿಂದ ಹೊರಟ ಮೆರವಣಿಗೆಯಲ್ಲಿ ಹರಹರ ಮಹಾದೇವ್, ಶಿವ ಶಿವ ಶಂಭೋ ಮೊದಲಾದ ಉದ್ಘೋಷದೊಂದಿಗೆ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಸುಮಾರು 2000ಕ್ಕೂ ಅಧಿಕ ಸಾಧು ಸಂತರ ಅಪೂರ್ವ ಪಾದಯಾತ್ರಾ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಕಷಾಯ ವಸ್ತ್ರ ಧರಿಸಿದ ಸನ್ಯಾಸಿಗಳು, ಶ್ವೇತ ವಸ್ತ್ರ ಧರಿಸಿದ ಸಂತರು, ಶರೀರಕ್ಕೆ ಭಸ್ಮ ಬಳಿದುಕೊಂಡ ನಾಗಾ ಸಾಧುಗಳು, ಜನಪ್ರತಿನಿಧಿಗಳು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.