ಎಲ್.ಐ.ಸಿ 62 ನೇ ವಿಮಾ ಸಪ್ತಾಹ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ 1956 ನೇ ಸೆ.1 ರಲ್ಲಿ ಪ್ರಾರಂಭಗೊಂಡಿದ್ದು, 62ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸೆ.1 ರಿಂದ 7ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಮಾ ಸಪ್ತಾಹ ಆಚರಿಸುತ್ತಿದೆ. ಇದರ ಉದ್ಘಾಟನೆಯನ್ನು ಆ ದಿನದ ಪ್ರಥಮ ಗ್ರಾಹಕಿ ಶ್ರೀಮತಿ ಪ್ರವಿತಾ ನಾವೂರು ರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿದರು.
ಶಾಖಾಧಿಕಾರಿ ಆರ್.ಡಿ ಯೋಗೇಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ, 5 ಕೋಟಿ ರೂಪಾಯಿಯೊಂದಿಗೆ ಪ್ರಾರಂಭವಾದ ಸಂಸ್ಥೆ ರೂ. 25.84 ಲಕ್ಷ ಕೋಟಿ ಲೈಫ್‌ಫಂಡ್ ನೊಂದಿಗೆ ವಿಮಾ ಕ್ಷೇತ್ರದ ಮೂಲಕ ಸರಕಾರದ ಆರ್ಥಿಕ ವ್ಯವಸ್ಥೆಗೆ ಸಹಕಾರ ನೀಡುತ್ತಿದೆ. ವಿಮಾ ನಿಗಮ 8 ವಲಯ, 113 ವಿಭಾಗ, 2048 ಶಾಖೆ, 1430 ಉಪಗ್ರಹ ಶಾಖೆ, 1.12 ಲಕ್ಷ ಸಿಬ್ಬಂದಿ ಹಾಗೂ 12ಲಕ್ಷ ಪ್ರತಿನಿಧಿಗಳ ಜಾಗದೊಂದಿಗೆ ಕಾರ್ಯಾಚರಿಸುತ್ತಿದೆ ಎಂದರು.
ಅಭಿವೃದ್ಧಿ ಅಧಿಕಾರಿ ಎಂ.ವಿ ಶೆಟ್ಟಿ, ಟಿ.ಡಿ ರಾಘವೇಂದ್ರ, ಉದಯಶಂಕರ್, ಆಡಳಿತಾಧಿಕಾರಿ ಕೇಶವ.ಎಂ, ಪ್ರತಿನಿಧಿಗಳು, ಸಿಬ್ಬಂದಿ ವರ್ಗದವರು, ಗ್ರಾಹಕರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.