ಬೆಳ್ತಂಗಡಿ : 2018-19 ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಕೊಳೆರೋಗ ತಗಲಿದ್ದು, ನಷ್ಟವನ್ನು ಅಂದಾಜಿಸುವ ಸಲುವಾಗಿ ಸಂತ್ರಸ್ತ ರೈತರಿಂದ ಕೊಳೆರೋಗದಿಂದ ಉಂಟಾದ ಶೇಕಡವಾರು ಫಸಲು ನಷ್ಟದ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತದಿಂದ ಪಡೆದು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ನಂಬರ್, ಜಮೀನಿನ ಪಹಣಿ, ಅಡಿಕೆ ಬೆಳೆದಿರುವ ವಿಸ್ತೀರ್ಣದ ಬಗ್ಗೆ ದಾಖಲೆಗಳೊಂದಿಗೆ ಗ್ರಾ.ಪಂ ಕಚೇರಿಯಲ್ಲಿ ಅಥವಾ ಗ್ರಾಮ ಕರಣಿಕರ ಕಚೇರಿಯಲ್ಲಿ ಅಥವಾ ಈ ಕೆಳಗಿನ ದಿನಗಳಲ್ಲಿ ಪಂಚಾಯತಕ್ಕೆ ನಿಯೋಜಿಸಲ್ಪಟ್ಟ ಸಹಾಯಕ ತೋಟಗಾರಿಕಾ ಅಧಿಕಾರಿಗಳಲ್ಲಿ ನೀಡಬಹುದು ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ ಸಮಯ: ಮಹಾವೀರ ಸಹಾಯಕ ತೋಟಗಾರಿಕಾ ಅಧಿಕಾರಿ-ಸೆ.3-4 ಪಡಂಗಡಿ, ಮೇಲಂತಬೆಟ್ಟು, ಸೆ.4-5 ಕುವೆಟ್ಟು, ಮಾಲಾಡಿ, ಸೆ.5-6 ಮುಂಡಾಜೆ, ಕಡಿರುದ್ಯಾವರ, ಸೆ.6-7 ಮಿತ್ತಬಾಗಿಲು, ಮಲವಂತಿಗೆ, ಸೆ.7-8 ನಾವೂರು, ಇಂದಬೆಟ್ಟು, ಸೆ.10-11 ಚಾರ್ಮಾಡಿ, ನೆರಿಯ, ಸೆ.11-12 ಉಜಿರೆ, ಕಲ್ಮಂಜ, ಸೆ12-13 ಲಾಯಿಲ, ನಡ, ಸೆ.14-15 ಕೊಯ್ಯೂರು
ಲೋಕಯ್ಯ ಸಹಾಯಕ ತೋಟಗಾರಿಕಾ ಅಧಿಕಾರಿ– ಸೆ.3-4 ಕಳಿಯ, ಮಡಂತ್ಯಾರು ಸೆ.4-5 ಮಚ್ಚಿನ, ತಣ್ಣೀರುಪಂತ ಸೆ.5-6 ಬಾರ್ಯ, ತೆಕ್ಕಾರು ಸೆ.6-7 ಕಣಿಯೂರು, ಇಳಂತಿಲ ಸೆ.7-8 ಪುದುವೆಟ್ಟು, ಧರ್ಮಸ್ಥಳ ಸೆ.10-11 ಕೊಕ್ಕಡ, ಪಟ್ರಮೆ ಸೆ.11-12 ನಿಡ್ಲೆ, ಕಳೆಂಜ ಸೆ.12-13 ಬೆಳಾಲು, ಬಂದಾರು ಸೆ.14-15 ಅರಸಿನಮಕ್ಕಿ, ಶಿಶಿಲ ಸೆ.17-18 ಶಿಬಾಜೆ.
ಮಲ್ಲಿನಾಥ ಬಿರಾದಾರ ತೋಟಗಾರಿಕಾ ಸಹಾಯಕ– ಸೆ.3-4 ನಾರಾವಿ, ಅಂಡಿಂಜೆ ಸೆ.4-5 ಆರಂಬೋಡಿ, ಹೊಸಂಗಡಿ ಸೆ. 5-6 ಕಾಶಿಪಟ್ಣ, ಮರೋಡಿ ಸೆ.6-7 ಸುಲ್ಕೇರಿ, ಅಳದಂಗಡಿ ಸೆ.7-8 ಶಿರ್ಲಾಲು, ಬಳೆಂಜ ಸೆ.10-11,ವೇಣೂರು, ಕುಕ್ಕೇಡಿ.