ವೇಣೂರಿನ ಬಿ.ಪಿಇಂದ್ರರಿಗೆ ಸಾರ್ವಜನಿಕ ಶ್ರದ್ಧಾಂಜಲಿ

Advt_NewsUnder_1
Advt_NewsUnder_1

ವೇಣೂರು: ವೇಣೂರಿನ ಸುತ್ತಮುತ್ತಲಿನ ಪರಿಸರದ ಜನಪ್ರಿಯ ವೈದ್ಯರೂ, ಪ್ರಗತಿಪರ ಕೃಷಿಕರೂ, ಸಾಮಾಜಿಕ ಮುಂದಾಳುಗಳಾಗಿದ್ದು, ಆ.12 ರಂದು ನಿಧನರಾದ ಡಾ| ಬಿ.ಪಿ ಇಂದ್ರ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಆ.27 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ವಹಿಸಿ ಮಾತನಾಡುತ್ತಾ, ಬಿ.ಪಿ ಇಂದ್ರ ರವರು ವೈದ್ಯಕೀಯ ವೃತ್ತಿಯೊಂದಿಗೆ, ಸಾಮಾಜಿಕ ಕ್ಷೇತ್ರದಲ್ಲೂ ದುಡಿದ ದೊಡ್ಡ ಮನಸಿನ ವ್ಯಕ್ತಿ. ಇವರ ನೆನಪು ಸದಾ ಉಳಿಯುವಂತಾಗಲು ಯಾವುದಾದರೂ ಸ್ಮಾರಕವನ್ನು ಮಾಡಬೇಕು ಎಂದರು. ನಾರಾವಿ ಕ್ಷೇತ್ರದ ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜಯರಾಮ ಶೆಟ್ಟಿ, ವೇಣೂರು ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಶಿವರಾಮ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಡಾ| ಬಿ.ಪಿ ಇಂದ್ರರೊಂದಿಗೆ ಕಳೆದ ದಿನಗಳನ್ನು ಸ್ಮರಿಸುತ್ತಾ, ಶ್ರದ್ಧಾಂಜಲಿ ಅರ್ಪಿಸಿದರು. ಸಹೋದರ ಡಾ| ದೇವಕುಮಾರ್ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇಣೂರು ಪ್ರಾ.ಕೃ.ಪ.ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಮಹಮ್ಮದ್, ಆರಂಬೋಡಿ ಗ್ರಾ.ಪಂ ಸದಸ್ಯ ಹರೀಶ್ .ಕೆ ಮಾತನಾಡಿದರು.ಬಿ.ಪಿ ಇಂದ್ರರವರ ಮಕ್ಕಳು, ಕುಟುಂಬವರ್ಗದವರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವೇಣೂರು ಜೈನ ದಿಗಂಬರ ಕ್ಷೇತ್ರದ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಸ್ವಾಗತಿಸಿ, ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಪ್ರಭಾಕರ ಹೆಗ್ಡೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.