ಸಾರ್ವಜನಿಕ ಶೌಚಾಲಯದಲ್ಲಿ ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಂತೆಮಾರುಕಟ್ಟೆ ಸಾರ್ವಜನಿಕ ಶೌಚಾಲಯದಲ್ಲಿ ಕುಟುಂಬವೊಂದು ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂತೆಕಟ್ಟೆ ಸಾರ್ವಜನಿಕ ಶೌಚಾಲಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ  ಮೂಲತಃ ಬಿಹಾರ ರಾಜ್ಯದ ಮಧುವನ್ ಗ್ರಾಮದ ಬೋಲಾ ಮೆಹ್ತಾ ರವರು ತನ್ನ ಪತ್ನಿ ರಾಧದೇವಿ  ಹಾಗೂ ಮಗಳು 7 ವರ್ಷದ ನೇಹಾಳ ಜೊತೆಗೆ ವಾಸಿಸುತ್ತಿದ್ದಾರೆ. ಬೋಲಾ ಮೆಹ್ತಾ ದಂಪತಿಗೆ ಮೂರು ಮಕ್ಕಳಿದ್ದು , ಇಬ್ಬರು ಊರಿನಲ್ಲಿದ್ದು , ಚಿಕ್ಕ ಹೆಣ್ಣು ಮಗವೊಂದು ಜೊತೆಗಿದ್ದು ಪ್ರಸ್ತುತ ಮಾದರಿ ಹಿ.ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

ಸಂತೆಕಟ್ಟೆ ಸಾರ್ವಜನಿಕ ಶೌಚಾಲಯದಲ್ಲಿ ತೀರ ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿರುವ ಬಗ್ಗೆ ಕಳೆದ 2 ವರ್ಷಗಳಿಂದ ಸ್ಥಳೀಯ ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ತೀರ ಗಲೀಜು ಪ್ರದೇಶದಲ್ಲಿ ವಾಸಿಸುತ್ತಿದ್ದರೂ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲವಾಗಿದ್ದರೆ. ನಾವು ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದೇವೆ. ಸಾರ್ವಜನಿಕ ಶೌಚಾಲಯದಲ್ಲಿ ವಾಸಿಸುವ ಬಗ್ಗೆ ಸ್ಥಳೀಯ ವ್ಯಾಪಾರಸ್ಥರಿಗೆ ಇರುವ ಕಾಳಜಿ ಆಡಳಿತಾಧಿಕಾರಿಗಳಿಗೆ ಇಲ್ಲ. ಇಲ್ಲಿ ಸೊಳ್ಳೆಗಳ ಕಾಟ, ಒಂದು ಕಡೆಗೆ ಶೌಚಾಲಯದ ವಾಸನೆ , ಇನ್ನೊಂದು ಕಡೆ ಹಸಿ ಮೀನು , ಒಣ ಮೀನಿನ ವಾಸನೆ , ಮತ್ತೊಂದು ಕಡೆ ಹಸಿ ಮಾಂಸ ಅಂಗಡಿಗಳ ವಾಸನೆಗಳ ನಡುವೆ ನಾವು ಬದುಕುತ್ತಿದ್ದೇವೆ. ತಮ್ಮ ಮಗಳು ಇತ್ತೀಚಿಗೆ ಎರಡು ಬಾರಿ ಜ್ವರಕ್ಕೆ ತುತ್ತಾಗಿದ್ದಾಳು , ಆದರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲವಾಗಿದ್ದಾರೆ ಎಂದು ರಾಧದೇವಿ ನೋವಿನಿಂದ ನುಡಿದಿದ್ದಾರೆ.

ಪಟ್ಟಣ ಪಂಚಾಯತ್ ಆಡಳಿತ ಹಾಗೂ ತಾಲೂಕು ಆಡಳಿತ  ಇನ್ನಾದರೂ ಎಚ್ಚೆತ್ತು ಶೌಚಾಲಯದಲ್ಲಿ ಬದುಕು ಸಾಗಿಸುತ್ತಿರುವ ಬೋಲಾ ಮೆಹ್ತಾ ಪರಿವಾರಕ್ಕೆ ಬದುಕಲು ಬೇಕಾದ ಸೂರೊಂದನ್ನು ಒದಗಿಸುವ ಮೂಲಕ  ಮಾವವೀಯತೆ ಮೆರೆಯಲಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.