ಉಜಿರೆ: ಶ್ರೀ.ಧ.ಮ ಕಾಲೇಜು ಉಜಿರೆಯ ರೋವರ್ಸ್ ರೇಂಜರ್ಸ್ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಸದ್ಭಾವನಾ ದಿನಾಚಾರಣೆಯನ್ನು ಆಚರಿಸಿತು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಗಣರಾಜ್ಮುಖ್ಯ ಅತಿಥಿಯಾಗಿದ್ದರು. ರೋವರ್ಸ್ ರೇಂಜರ್ಸ್ ಸಂಯೋಜಕಿ ವಾಸಂತಿ ಎಂ.ಕೆ ಪ್ರತಿಜ್ಞೆ ವಿಧಿ ಬೋಧಿಸಿದರು.
ರೋವರ್ ಅರ್ಜುನ್ ಶೆಣೈ, ಇಮ್ರಾನ್, ಕು. ಕಿರಣ್ ಮತ್ತು ಕು ಸುರಕ್ಷಾ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹೇಶ್ ಕುಮಾರ್ ಶೆಟ್ಟಿ ವಹಿಸಿದ್ದರು. ಪ್ರಸಾದ್ ಉಪಸ್ಥಿತರಿದ್ದರು. ಕು.ವೃಂದಾ ನಿರೂಪಿಸಿದರು, ರೋವರ್ ನರೇಶ್ ಶೆಣೈ ಸ್ವಾಗತಿಸಿ, ರೋವರ್ ನವನೀತ್ ವಂದಿಸಿದರು.