ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್ ನಿಂದ ರಕ್ತದಾನ ಶಿಬಿರ: 63 ಯುನಿಟ್ ರಕ್ತ ಸಂಗ್ರಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಹಿಂದೆಲ್ಲಾ ಅನ್ನದಾನ ಶ್ರೇಷ್ಟದಾನ ಎಂಬುದಿತ್ತು. ಈಗ ಹಣ ಕೊಟ್ಟರೆ ಅದು ಸಿಗಬಹುದು. ಆದರೆ ರಕ್ತದಾನ ಎಂಬುದು ಹಣ ಕೊಟ್ಟು ಪಡೆಯಲು ಸಾಧ್ಯವಿಲ್ಲ. ಅಂತೆಯೇ ಈಗ ಬಹು ಪ್ರಚಾರ ಹೊಂದಿರುವ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಮಾಹಿತಿ ಜನತೆಗೆ ದೊರೆಯುವಂತೆ ಮಾಡುವ ಕೆಲಸ ಸಂಘ ಸಂಸ್ಥೆಗಳ ಮೂಲಕ ಆಗಬೇಕಾಗಿದೆ ಎಂದು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅಭಿಪ್ರಾಯಪಟ್ಟರು.
ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಇದರ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ, ರೆಡ್‌ಕ್ರಾಸ್ ಸಂಸ್ಥೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಜೇಸಿ ಭವನದಲ್ಲಿ ಆ. 26 ರಂದು ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಕೋಶಾಧಿಕಾರಿ ಡಾ. ಇ.ಕೆ ಸಿದ್ದೀಕ್ ವಗ್ಗ ರಕ್ತದಾನ ಮಹತ್ವ ತಿಳಿಸಿದರು.
ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಲಹೆಗಾರ ಮುಸ್ತಫಾ ಅಡ್ಡೂರು ಡೆಮ್ಮೆಲೆ, ಬೆಂಗಳೂರು ಜಿಲ್ಲೆ ಅಡ್ಮಿನ್ ಮುಸ್ತಫಾ ಬೋಳಂತೂರು, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಕೆ ಧರಣೇಂದ್ರ ಜೈನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಮೇದಿನಿ ಡಿ ಗೌಡ, ಜೇಸಿಐ ಪೂರ್ವಾಧ್ಯಕ್ಷರಾದ ತುಕರಾಮ ಬಿ ಮತ್ತು ಸುಭಾಶ್ಚಂದ್ರ ಎಂ.ಪಿ, ಬ್ಲಡ್ ಹೆಲ್ಪ್‌ಲೈನ್ ಬೆಳ್ತಂಗಡಿ ವಲಯದ ಅಡ್ಮಿನ್ ಸಲೀಂ ಮುರ, ಸದಸ್ಯ ಹಾರಿಸ್ ಅಡ್ಕ, ಅಲ್ತಾಫ್ ಬಿಲಿಗುಳ ಮೊದಲಾದವರು ವೇದಿಕೆಯಲ್ಲಿದ್ದರು.
ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್ ಸಕ್ರೀಯ ಸಂಘಟಕ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಸಹಕಾರ ನೀಡಿದ ಸಂಘ ಸಂಸ್ಥೆಗೆ ಪ್ರಮಾಣಪತ್ರ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.