HomePage_Banner_
HomePage_Banner_
HomePage_Banner_

ಎಸ್.ಡಿ.ಎಮ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾಜೆಕ್ಟಿಗೆ ರಾಷ್ಟ್ರಮಟ್ಟದ ಮನ್ನಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ಉಜಿರೆಯ ವಿದ್ಯಾರ್ಥಿಗಳು, ಡಿಎಸ್ ಟಿ ಗವರ್ನ್‌ಮೆಂಟ್ ಇಂಡಿಯಾದ ಸಹಯೋಗದೋಂದಿಗೆ Texas Instruments  ಪ್ರತಿಷ್ಟಿತ  ಸಂಸ್ಥೆಯವರು ಇತ್ತೀಚೆಗೆ ಆಯೋಜಿಸಿದ ಇಂಡಿಯಾ ಇನ್ನೋವೆಶನ್ ಚಾಲೆಂಜ್ ಡಿಸೈನ್ ಸ್ಪರ್ಧೆ 2018 ರಲ್ಲಿ ರಾಷ್ಟ್ರಮಟ್ಟದ ಅಗ್ರ ಹತ್ತರ ಸ್ಥಾನದಲ್ಲಿ ಒಬ್ಬರಾಗಿ ಸತತವಾಗಿ ಎರಡನೇ ಬಾರಿಗೆ ಗುರುತಿಸಿಕೊಂಡಿದ್ದಾರೆ ಹಾಗೂ 20 ಲಕ್ಷ ಅಭಿವೃದ್ಧಿ ಪೂರಕ ಧನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಗ್ಯಕರ ಉಸಿರಾಟಕ್ಕೆ ಪೂರಕವಾಗುವಂತಹ ಗಾಳಿ ಶುಧ್ದೀಕರಣ ಯಂತ್ರವನ್ನು ಕಾಲೇಜಿನ ವಿದ್ಯಾರ್ಥಿಗಳ ತಂಡವು ಅಭಿವೃಧ್ದಿ ಪಡಿಸಿ ಮೇಲಿನ ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ತಂಡದ ಸದಸ್ಯರಾದ ಅಶ್ವಿನಿ ಕಾಮತ್, ಅಶ್ವಿನಿ ಎಮ್.ಎಸ್ ಎಲೆಕ್ಟ್ರಾನಿಕ್ಸ್ ವಿಭಾಗ, ನಿಶಾಂತ್ ನಾಯಕ್ ಎಲೆಕ್ಟ್ರಿಕಲ್ ವಿಭಾಗ, ನರೇಶ್ ಹೊಳ್ಳ ಮೆಕ್ಯಾನಿಕಲ್ ವಿಭಾಗ ಇವರಿಗೆ ಈ ಪ್ರಾಜೆಕ್ಟನ್ನು ಮಾರುಕಟ್ಟೆಯ ಅಗತ್ಯಕ್ಕನುಗುಣವಾಗಿ ಅಭಿವೃಧ್ದಿಪಡಿಸುವ ಸಲುವಾಗಿ ಇಪ್ಪತ್ತು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ ಹಾಗೂ ಬೆಂಗಳೂರಿನ ಐಐಎಮ್ ನಲ್ಲಿ ಒಂದು ವರ್ಷದ  ಇನ್ ಕ್ಯೂಬೇಷನ್ ಅವಕಾಶ ದೊರೆತಿದೆ.
ಎಲೆಕ್ಟ್ರಾನಿಕ್ಸ ವಿಭಾಗದ ಪ್ರೊ|ಮಹೇಶ್‌ರವರು ಪ್ರಾಜೆಕ್ಟ್ ಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ|ಡಿ ವೀರೇಂದ್ರ ಹೆಗ್ಗಡೆಯವರು, ಕಾರ್‍ಯದರ್ಶಿಗಳಾದ ಡಾ| ಬಿ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲರಾದ ಡಾ|ಅಶೋಕ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.