ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಉದ್ಘಾಟನೆ

Advt_NewsUnder_1
Advt_NewsUnder_1

ಮಡಂತ್ಯಾರು :  ಸೇಕ್ರೆಡ್ ಹಾರ್ಟ್ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಉದ್ಘಾಟನಾ ಸಮಾರಂಭವು ಆ.23 ರಂದು ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ  ಸೇಕ್ರೆಡ್ ಹಾರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ಶಾಸಕ  ಹರೀಶ್ ಪೂಂಜ  ರವರು ಸಮಾರಂಭವನ್ನು ಉದ್ಘಾಟಿಸುತ್ತಾ, ಕಾಲೇಜುಗಳಲ್ಲಿನ ವಿದ್ಯಾರ್ಥಿ ಸಂಘಗಳು ಸಮಾಜಕ್ಕೆ ಹಲವಾರು ನಾಯಕರನ್ನು ನೀಡುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ. ತಾನು ಇದೇ ಕಾಲೇಜಿನಿಂದ ನಾಯಕತ್ವದ ಗುಣಗಳನ್ನು ರೂಢಿಸಿಕೊಂಡು ಬೆಳೆದವನು. ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿ ಇದೆ. ಅವರ ಮುಂದೆ ಸಮಾಜ ತಲೆ ಬಾಗುತ್ತದೆ ಎಂದರು. ಹಳೇ ವಿದ್ಯಾರ್ಥಿಯಾಗಿ ತಾನು ರಾಷ್ಟ್ರೀಯ ಸೇವಾ ಯೋಜನೆಯಂತಹ ವಿವಿಧ ಚಟುವಟಿಕೆಗಳಲ್ಲಿ ನಾಯಕನಾಗಿ ತೊಡಗಿಸಿಕೊಂಡ ಮಧುರ ನೆನಪುಗಳನ್ನು ವಿದ್ಯಾರ್ಥಿಗಳೊಂದಿಗೆ  ಹಂಚಿಕೊಂಡರು. ವಿದ್ಯಾರ್ಥಿಗಳು ಸಮಾಜದ ಮುಂದಿನ ಪ್ರಜೆಗಳು ಎಂಬ ಮಾತಿದೆ. ಆದರೆ ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು ಅನ್ನುವುದಕ್ಕಿಂತ ಅವರು ಇಂದಿನ ಪ್ರಜೆಗಳೇ ಆಗಿರುತ್ತಾರೆ. ಮಾನವ ತಾನು ಸ್ವಾರ್ಥಿಯಾಗಿ ಬಾಳದೆ ಸಮಾಜ ಮುಖಿಯಾಗಿ ಬಾಳಿದರೆ ಹಲವಾರು ತಲೆಮಾರುಗಳವರೆಗೂ ಅವನ ಸಾಧನೆಗಳ ಮೂಲಕ ನೆನಪಲ್ಲಿ ಉಳಿಯುತ್ತಾನೆ. ಈ ದೇಶಕ್ಕಾಗಿ ದೇಹ ತ್ಯಾಗ ಮಾಡಿದ ಅನೇಕ ದೇಶಭಕ್ತರ ಹೆಸರು ಇಂದಿಗೂ ಅವರ ಒಳ್ಳೆಯ ಕಾರ್ಯಗಳಿಂದ ಉಳಿದಿದೆ. ಯುವ ಶಾಸಕನಾಗಿ ಕ್ಷೇತ್ರದ ಅಭಿವೃಧ್ಧಿಯಲ್ಲಿ ಸಂಪೂರ್ಣವಾಗಿ ತಾನು ತೊಡಗಿಸಿಕೊಳ್ಳುತ್ತೇನೆ ಎಂಬ ಮಾತನ್ನು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಅಲೆಕ್ಸ್ ಐವನ್ ಸಿಕ್ವೇರಾ ಅವರು ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಕಾಲೇಜಿನ ವತಿಯಿಂದ ಹಾಗೂ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ- ರಕ್ಷಕ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ  ಮಾಧವ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸದಸ್ಯರನ್ನು ಹಾಗೂ ಶಾಸಕರನ್ನು ಅಭಿನಂದಿಸಿ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯೆ ಐರಿನ್ ಮೊರಾಸ್‌ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಅಧಿಕಾರಿಗಳಾದ ಡಾ|ಜೋಸೆಫ್ ಎನ್.ಎಂ ಪ್ರಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಡಾ|ಶ್ಯಾಮ್ ಭಟ್ ಧನ್ಯವಾದವಿತ್ತರು. ಶ್ರೀಮತಿ ಬೇಬಿ ಎ. ಹಾಗೂ  ಸುಶೀಲ್ ಟೋಮ್ ಜೋಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.