HomePage_Banner_
HomePage_Banner_
HomePage_Banner_

ತಣ್ಣೀರುಪಂತ ಹಾ.ಉ.ಸ.ಸಂಘ ರಾಜ್ಯಮಟ್ಟದಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತಿರುವ ಸಂಸ್ಥೆ

ಕಲ್ಲೇರಿ: ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘ ರಾಜ್ಯ ಮಟ್ಟದಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತಿರುವ, ದ.ಕ ಜಿಲ್ಲೆಯಲ್ಲಿಯೇ ಮಂಚೂಣಿಯಲ್ಲಿರುವ ಸಂಸ್ಥೆ ಎಂದು ಸಂಘದ ಅಧ್ಯಕ್ಷ ಬಿ.ನಿರಂಜನ್ ತಿಳಿಸಿದರು.
ಅವರು ಆ.22 ರಂದು ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಕೇವಲ 40 ಲೀ. ಹಾಲಿನೊಂದಿಗೆ 1985 ರಲ್ಲಿ ಸಂಸ್ಥೆ ಪ್ರಾರಂಭಗೊಂಡು 2017-18ರಲ್ಲಿ ಒಟ್ಟು 18,45,061.5ಲೀ. ಹಾಲು ಶೇಖರಣೆಯೊಂದಿಗೆ ಒಟ್ಟು ರೂ.5,83,26,774.81 ಮೊತ್ತದ ಹಾಲು ಸಂಗ್ರಹಿಸಿದ್ದು, ಪ್ರಸ್ತುತ ದಿನ ಒಂದಕ್ಕೆ 5440 ಲೀ. ಸಂಗ್ರಹಣೆ ಮಾಡುತ್ತಿದೆ. ಒಟ್ಟು ರೂ50,52,914.68 ಕ್ಷೇಮನಿಧಿ ಹೊಂದಿದ್ದು, ರೂ. 50,10,000 ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಷೇರಿಗೆ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ಐ.ಎ.ಎಸ್ ಮಾನ್ಯತೆ ಪಡೆದ ಏಕೈಕ ಸಂಘವಾಗಿರುತ್ತದೆ.
ಕರ್ನಾಟಕ ಹಾಲುಉತ್ಪಾದಕರ ಮಹಾಮಂಡಳಿ ಮತ್ತು ರಾಜ್ಯ ಸಹಕಾರಿ ಇಲಾಖೆಗಳಿಂದ ರಾಜ್ಯದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಸಹಕಾರಿ ಸಂಘ ಎಂದು ಪುರಸ್ಕರಿಸಲ್ಪಟ್ಟಿದೆ. ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಉತ್ತಮ ಸಂಘವೆಂದು ಹಲವು ಬಾರಿ ಪ್ರಶಸ್ತಿ ಪಡೆದಿದೆ. ದ.ಕ ಜಿಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಹಲವು ಬಾರಿ ಉತ್ತಮ ಹಾಲು ಉತ್ಪಾದಕರ ಸಂಘವೆಂದು ಪ್ರಶಸ್ತಿ ಪಡೆದಿರುತ್ತದೆ.
ಒಟ್ಟು 986 ಸದಸ್ಯರನ್ನು ಹೊಂದಿದ್ದು, 760 ಮಂದಿ ಸಕ್ರಿಯ ಸದಸ್ಯರಿದ್ದು ಒಟ್ಟು ರೂ.916000 ಪಾಲು ಬಂಡವಾಳ ಹೊಂದಿದೆ. ಆರ್ಥಿಕ ವರ್ಷದಲ್ಲಿ ರೂ. 44,29,128.74 ಲಾಭ ಗಳಿಸಿದ್ದು ಸದಸ್ಯರಿಗೆ ರೂ.24,41,557 ಬೋನಸ್ ಘೋಷಸಿದೆ.
1990 ರಲ್ಲಿ ಸರಕಾರದಿಂದ ಕೊಡ ಮಾಡಿದ 6.52 ಎಕ್ರೆ ಗೋಮಾಳ ಜಮೀನಿನಲ್ಲಿ ೮ಬಗೆಯ ವಿವಿಧ ತಳಿಯ ಹೈಬ್ರಿಡ್ ನೇಪಿಯರ್ ಹುಲ್ಲುಗಳನ್ನು ಬೆಳೆಸುತ್ತಿದ್ದು, ರಾಜ್ಯದ ಇತರ ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರಿಗೆ ಸರಬರಾಜು ಮಾಡಲಾಗುತ್ತಿದೆ.
ಉಭಯ ಜಿಲ್ಲೆಯಲ್ಲಿಯೇ ಪ್ರಥವಾಗಿ ಬಿ.ಎಂ.ಸಿ ಅಳವಡಿಸಿದ ಸಂಘ 5000 ಸಾಮರ್ಥ್ಯದ ಕೂಲರ್ ಅಳವಡಿಸಿದ್ದು, ಸಂಘದ ಸ್ವ ಸಾಮರ್ಥ್ಯದಿಂದಲೇ ಬಿ.ಎಂ.ಸಿ ನಿರ್ಮಿಸಿರುವ ಏಕೈಕ ಸಂಘ. ಸದಸ್ಯರಿಗೆ ಅನುಕೂಲವಾಗುವಂತೆ ಕಲ್ಯಾಣನಿಧಿ ಪ್ರಾರಂಭಿಸಿ ಸಕ್ರೀಯ ಸದಸ್ಯರಿಗೆ ವೈದ್ಯಕೀಯ ಒಟ್ಟು ರೂ.1,59,500 ಕಲ್ಯಾಣ ನಿಧಿಯಿಂದ ನೀಡಿರುತ್ತೇವೆ. ಸದಸ್ಯರಿಗೆ ಪ್ರತೀ ಲೀಟರ್‌ಗೆ ಒಟ್ಟು ರೂ.37.12ನೀಡುತಿದ್ದೇವೆ. ಸಂತ್ರಸ್ತ ಕೊಡಗಿಗೆ ಸದಸ್ಯರ ಒಂದು ದಿನದ ಹಾಲು ಬಾಬ್ತು ಒಟ್ಟು2.ಲಕ್ಷ ರೂ ದೇಣಿಗೆ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಜಯರಾಜ್ ಹೆಗ್ಡೆ, ನಿರ್ದೇಶಕರುಗಳಾದ ದಿನೇಶ್ ಗೌಡ, ಜನಾರ್ದನ ಗೌಡ, ಜಾನ್ ಫೆಲಿಕ್ಸ್, ತಿಮ್ಮಪ್ಪ ಸಾಲಿಯಾನ್, ತಿರುಮಲೇಶ್ವರ್ ಭಟ್, ಹಾಜಿರ, ಪುಷ್ಪಾ, ಪಿ.ಸಿ ನಾಯ್ಕ, ಸೂರಪ್ಪ ಪೂಜಾರಿ, ಮಾಜಿ ನಿರ್ದೇಶಕ ಅತೀ ಹೆಚ್ಚು ಹಾಲು ಹಾಕುವ ವಿಲಿಯಂ ಲೋಬೋ, ಬಿ.ಎಸ್ ಹಮೀದ್, ಅಶೋಕ್ ಕುಮಾರ್, ಕಾರ್ಯದರ್ಶಿ ಜಯರಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.