ಬೆಳ್ತಂಗಡಿ: ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ಮರಾಟಿ ಯುವ ವೇದಿಕೆ ಬೆಂಗಳೂರು ಇದರ ದಶಮಾನೋತ್ಸವ ಮತ್ತು ಯುವ ಸಿಂಚನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಪ್ರತಿಭಾನ್ವಿತ ಮರಾಟಿ ಸಮುದಾಯದ ಬಡ ಮತ್ತು ಅತ್ಯಂತ ಹೆಚ್ಚು (95% ಅಧಿಕ) ಅಂಕ ಪಡೆದ ವಿದ್ಯಾರ್ಥಿಗಳಾದ ಪಿಯುಸಿ ಮಧುಶ್ರೀ ಮುಂಡಾಜೆ (587. 97.83%),ಪೂಜಾ ಕಣಿಯೂರು(575. .95.83%) ಇವರನ್ನು ಧನ ಸಹಾಯ ಮತ್ತು ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಕರ್ನಾಟಕ ಮರಾಟಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ , ಪ್ರಧಾನ ಕಾರ್ಯದರ್ಶಿ ಮೋನಪ್ಪ ನಾಯ್ಕ ಮುಂಡಾಜೆ, ಅತಿಥಿಗಳಾದ ಡಾ|ಶರತ್ ಬೆಂಗಳೂರು, ಶಂಕರ್ ನಾಯ್ಕ ಡ್ರಗ್ಸ್ ಕಂಟ್ರೋಲ್ ಮಂಗಳೂರು, ಬಿ.ಸುಶೀಲಾ ನಿವೃತ್ತ ಶಿಕ್ಷಣ ಇಲಾಖೆ ಅಧಿಕಾರಿ, ಮರಾಟಿ ಯುವ ವೇದಿಕೆಯ ಅಧ್ಯಕ್ಷ ದಿನೇಶ್, ಬಾಬು ಮೂಲೆ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಚಂದ್ರಮತಿ, ಬೆಳ್ತಂಗಡಿ ತಾಲ್ಲೂಕು ಯುವ ಮರಾಟಿ ಸೇವಾ ಸಂಘ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಿಹಿಸಿದ್ದರು.